ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಿಗ್ ಬಾಸ್ ಸೀಸನ್ 8 ಇದೀಗ 100 ದಿನ ಪೂರೈಸಿದ್ದು, ಇದರ ಬೆನ್ನಲ್ಲೆ ದೊಡ್ಮನೆಯಲ್ಲಿ ಮತ್ತೆ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಪ್ರಶಾಂತ್ ಸಂಬರಗಿಗೆ ಕಳಪೆ ಪಟ್ಟ ಸಿಕ್ಕಿದೆ.
ಪ್ರತಿ ವಾರದಂತೆ ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಶುಭಾ ಪೂಂಜಾ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ತಲಾ ಮೂರು ವೋಟ್ ಸಿಕ್ಕಿತ್ತು. ಆಗ ಕ್ಯಾಪ್ಟನ್ ದಿವ್ಯಾ ಉರುಡುಗ ಶುಭಾ ಟಾಸ್ಕ್ಗಳಲ್ಲಿ ಭಾಗವಹಿಸಲು ಶ್ರಮಿಸಿದ್ದಾರೆ ಆದರೆ ಪ್ರಶಾಂತ್ ಅವರು ಸಿಕ್ಕ ಅವಕಾಶವನ್ನು ಕೈಬಿಟ್ಟಿದ್ದರು ಎಂಬ ಕಾರಣಕ್ಕೆ ಅವರಿಗೆ ಕಳಪೆ ನೀಡಿದ್ದಾರೆ.
ಬಳಿಕ ಜೈಲಿಗೂ ಹೋಗುವುದಿಲ್ಲ. ಏನು ಬೇಕಾದರೂ ಆಗಲಿ ಎಂದು ಪಟ್ಟು ಹಿಡಿದ ಪ್ರಶಾಂತ್ ಅವರಿಗೆ ಚಕ್ರವರ್ತಿ ಮನವೊಲಿಸಿ ಜೈಲಿಗೆ ಕಳುಹಿಸುತ್ತಾರೆ.
ದಿವ್ಯಾಗೆ ಕ್ಯಾಪ್ಟನ್ ಶಿಪ್: ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿದ್ದ ಶಮಂತ್, ಮಂಜು ಪಾವಗಡ, ವೈಷ್ಣವಿ, ಅರವಿಂದ್ ಹಾಗೂ ದಿವ್ಯಾ ಉರುಡುಗ ಭಾಗವಹಿಸಿದ್ದರು. ಈ ಟಾಸ್ಕ್ ಗಳಲ್ಲಿ ಅತ್ಯುತ್ತಮವಾಗಿ ಆಡಿದ ದಿವ್ಯಾ ಉರುಡುಗ ಮುಂದಿನ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇದರಿಂದ ಮುಂದಿನ ವಾರದ ನಾಮಿನೇಷನ್ ನಿಂದ ಬಜಾವ್ ಆಗಿದ್ದು, ಟಾಪ್ 5ರಲ್ಲಿ ದಿವ್ಯಾ ಕೂಡ ಸ್ಥಾನ ಪಡೆಯೋದು ಖಚಿತವಾಗಿದೆ.