ಪ್ರವೀಣ್ ಕೊಲೆ ಪ್ರಕರಣ: ಸುಳ್ಯ ನಿವಾಸಿಗಳಿಂದಲೇ ಕೃತ್ಯ? ಏನಂದಿದೆ ಪೊಲೀಸ್ ಮೂಲಗಳು??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಮೂರು ಪ್ರಮುಖ ಆರೋಪಿಗಳಾದ ಶಿಯಾಬ್, ಬಶೀರ್ ಮತ್ತು ರಿಯಾಜ್ ರನ್ನು ಬಂಧನ ಮಾಡಲಾಗಿದ್ದು, ಮೂವರು ಸುಳ್ಯ ಮೂಲದವರು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನಂಟು?

ಪ್ರವೀಣ್ ನೆಟ್ಟಾರು ಕೊಲೆಯಾದ ಬಳಿಕ ಹಂತಕರು ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನಂಟು ಹೊಂದಿದವರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿತ್ತು. ಈಗಾಗಲೇ ಕೊಲೆಗೆ ಸಹಕರಿಸಿದ ಆರೋಪಿಗಳ ಬಂಧನವಾಗಿದ್ದು ಸುಳ್ಯದ ಎಸ್.ಡಿ.ಪಿ.ಐ ಕಚೇರಿಯಲ್ಲಿ ಮಹಜರು ಪ್ರಕ್ರಿಯೆಯನ್ನೂ ನಡೆಸಲಾಗಿತ್ತು. ಬಂಧಿತ ಆರೋಪಿಗಳಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ಪದಾಧಿಕಾರಿಗಳಾಗಿದ್ದು ಕೊಲೆಗೆ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನಂಟಿನ ಸಂಶಯ ಬಲವಾಗುತ್ತಿದೆ. ಈ ನಡುವೆ ಕೊಲೆ ಪ್ರತೀಕಾರಕ್ಕಾಗಿ ನಡೆಯಿತೇ ಅಥವಾ ವೃತ್ತಿ ವೈಷಮ್ಯದಿಂದ ನಡೆಯಿತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. ಈ ಎಲ್ಲಾ ವಿಚಾರಗಳಿಗೆ ಸ್ಪಷ್ಟ ಉತ್ತರ ಇಂದಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯ ಬಳಿಕ ತಿಳಿದು ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!