Wednesday, March 29, 2023

Latest Posts

5 ಬಾರಿ ನಮಾಜ್‌ ಮಾಡಿ ಏನ್‌ ಬೇಕಾದ್ರೂ ಮಾಡು: ಬಾಬಾ ರಾಮ್‌ದೇವ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲು 5 ಬಾರಿ ನಮಾಜ್‌ ಮಾಡಿದರೆ ಸಾಕು, ನೀನು ಹಿಂದು ಹುಡುಗಿಯ ಜೊತೆ ಏನ್‌ ಬೇಕಾದ್ರೂ ಮಾಡು, ಜಿಹಾದ್‌ ಹೆಸರಲ್ಲಿ ಟೆರರಿಸ್ಟ್‌ ಬೇಕಾದ್ರೂ ಆಗು, ನಿನ್ನ ತಲೆಯಲ್ಲಿ ಏನು ಮಾಡಬೇಕು ಅನಿಸುತ್ತೋ ಅದೆಲ್ಲವನ್ನೂ ಮಾಡಬಹುದು ಎಂದು ಮುಸ್ಲಿಂ ಧರ್ಮದ ಬಗ್ಗೆ ಯೋಗಗುರು ಬಾಬಾ ರಾಮ್​ದೇವ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗ ಗುರು, ಇಸ್ಲಾಂ ಧರ್ಮದಲ್ಲಿ ವ್ಯಕ್ತಿಗಳಿಗೆ ನಮಾಜ್‌ ಮಾಡುವ ಬಗ್ಗೆ ಮಾತ್ರವೇ ಹೇಳಿಕೊಡಲಾಗುತ್ತದೆ. ಅವರು ಕೂಡ ನಮಾಜ್ ಮಾಡಿದ ಬಳಿಕ, ಎಂಥಾ ಪಾಪಗಳನ್ನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ.

ಒಬ್ಬ ಮುಸಲ್ಮಾನ ಭಯೋತ್ಪಾದಕನಾಗಿದ್ದರೂ ಖಂಡಿತ ನಮಾಜ್ ಮಾಡುತ್ತಾನೆ . ಇಸ್ಲಾಮಿನ ಅರ್ಥವು ನಮಾಜ್ ತನಕ ಮಾತ್ರ ಅರ್ಥವಾಗುತ್ತದೆ. ನೀವು ಹಿಂದೂಗಳ ಹುಡುಗಿಯರನ್ನು ಅಪಹರಿಸಿಕೊಂಡು ಹೋಗುತ್ತೀರಿ ಅಥವಾ ಜಿಹಾದ್ ಹೆಸರಿನಲ್ಲಿ ಭಯೋತ್ಪಾದಕರಾಗುತ್ತೀರಿ, ನಿಮ್ಮ ಮನಸ್ಸಿಗೆ ಬಂದದ್ದನ್ನು ಮಾಡುತ್ತೀರಿ, ಆದರೆ, ಹಿಂದೂ ಧರ್ಮದಲ್ಲಿ ಹಾಗಲ್ಲ ಎಂದು ಹೇಳಿದರು.
ಇನ್ನು ಕ್ರಿಶ್ಚಿಯನ್‌ ಧರ್ಮದಲ್ಲೂ ಕೂಡ ಹಾಗೆ. ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡಿ ಮೇಣದ ಬತ್ತಿ ಹಚ್ಚಿ ಬಂದರೆ ಮುಗಿಯಿತು. ಅಲ್ಲಿಗೆ ನಿಮ್ಮ ಎಲ್ಲಾ ಪಾಪಗಳು ತೊಳೆದುಹೋಗುತ್ತದೆ. ಆದರೆ, ಹಿಂದು ಧರ್ಮದಲ್ಲಿ ಇಂಥವೆಲ್ಲಾ ಆಗೋದಿಲ್ಲ ಎಂದಿದ್ದಾರೆ.

ಇವೆಲ್ಲವನ್ನೂ ನಾನು ಹೇಳುತ್ತಿಲ್ಲ. ಈ ಜನರು ಮಾಡುತ್ತಿರೋದನ್ನು ಎಲ್ಲರೂ ನೋಡುತ್ತಿದ್ದಾರೆ. ಇಂಥವೆಲ್ಲಾ ಕೃತ್ಯ ಮಾಡಿದ ಬಳಿಕ, ಸ್ವರ್ಗದಲ್ಲಿ ತಮ್ಮ ಸ್ಥಾನ ಖಚಿತವಾಗಿ ಎನ್ನುವ ಭಾವನೆಯಲ್ಲಿರುತ್ತಾರೆ. ಸ್ವರ್ಗದಲ್ಲಿ ಬೇಕಾದೆಲ್ಲಾ ಸಿಗುತ್ತದೆ. ಮದ್ಯವನ್ನೂ ಕೂಡ ಅಲ್ಲಿ ಕುಡಿಯಬಹದು ಎಂದು ಅವರಿಗೆ ಹೇಳಲಾಗುತ್ತದೆ. ಆದರೆ, ಇಂಥ ಸ್ವರ್ಗ ನರಕಕ್ಕಿಂತಲೂ ಕೆಟ್ಟದು. ಹಾಗಿದ್ದರೂ ಅವರು ಮೀಸೆ ಬೋಳಿಸಿಕೊಳ್ಳುತ್ತಾರೆ ಹಾಗೂ ಕ್ಯಾಪ್‌ ಧರಿಸುತ್ತಾರೆ. ಇದು ಹುಚ್ಚುತನ. ಅವರು ಯಾವ ರೀತಿಯ ಯೋಚನೆಯಲ್ಲಿದ್ದಾರೆಂದರೆ, ಇಡೀ ಜಗತ್ತಿನ ಜನರನ್ನು ಇಸ್ಲಾಂಗೆ ಮತಾಂತರ ಮಾಡುವ ಇರಾದೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿ ಯಾರನ್ನು ಟೀಕೆ ಮಾಡುತ್ತಿಲ್ಲ. ಆದರೆ, ಅವರ ಜನರು ಇಂಥ ಯೋಚನೆಗಳಲ್ಲಿದ್ದಾರೆ. ಇಡೀ ಜಗತ್ತನ್ನೇ ಇಸ್ಲಾಂ ಮಾಡುವ ಯೋಚನೆಯಿದೆ ಎಂದು ಕೆಲವು ಹೇಳುತ್ತಾರೆ. ಇನ್ನೂ ಕೆಲವರು ಇಡೀ ವಿಶ್ವವನ್ನೇ ಕ್ರಿಶ್ಚಿಯನ್‌ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಮತಾಂತರ ಮಾಡಲು ಅವರಿಗೆ ಬೇಕಾದ ಅಜೆಂಡಾಗಳೇ ಇಲ್ಲ ಎಂದು ರಾಮ್‌ದೇವ್‌ ಮಾತನಾಡಿದ್ದಾರೆ.

ಆದರೆ, ಸನಾತನ ಧರ್ಮದಲ್ಲಿ ಹೀಗೆಲ್ಲಾ ಆಗೋದಿಲ್ಲ. ನಾವು ಬ್ರಹ್ಮ ಮಹೂರ್ಥದಲ್ಲಿ ದೇವರನ್ನು ನೆನೆಸಿಕೊಂಡು ಏಳಬೇಕು ಎಂದು ಹೇಳುತ್ತದೆ. ಯೋಗ, ಧ್ಯಾನ ಹಾಗೂ ಸಮಾಜದ ಸೇವೆ ಮಾಡು ಎಂದು ಹೇಳಲಾಗುತ್ತದೆ. ಇದು ನಮ್ಮ ಸನಾತನ ಧರ್ಮ. ದೇವರು ಯಾವುದೇ ಜಾತಿ ಧರ್ಮ ಸೃಷ್ಟಿ ಮಾಡಿಲ್ಲ. ಆತ ಮನುಷ್ಯರನ್ನು ಮಾತ್ರವೇ ಸೃಷ್ಟಿ ಮಾಡಿದ್ದು. ಉಳಿದೆಲ್ಲವನ್ನೂ ಮಾನವನೇ ಮಾಡಿಕೊಂಡಿದ್ದಾನೆ. ಅದರಲ್ಲೂ ಹಲವಾರು ಜಾತಿಗಳನ್ನು ಮಾಡಿಕೊಂಡಿದ್ದಾನೆ. ನಮ್ಮ ಧರ್ಮದ ಬಗ್ಗೆ ನಮಗೆ ಗೊತ್ತಿರಬೇಕು. ಧಾರ್ಮಿಕ ಗುರುಗಳ ಮಾರ್ಗದರ್ಶನ ಪಡೆಯಬೇಕು. ಧರ್ಮದ ರಕ್ಷಣೆಗೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!