ಟಿಪ್ಪುವಿನ ಕುತಂತ್ರಕ್ಕೆ ಬಲಿಯಾದ ಹಿರಿಯರಿಗೆ ಶ್ರದ್ಧಾಂಜಲಿ

ಹೊಸದಿಗಂತ ವರದಿ, ಕೊಡಗು:
ಟಿಪ್ಪು ಸುಲ್ತಾನ್ ಹಾಗೂ ಆತನ ಸಹಚರರ ಕುತಂತ್ರಗಳಿಂದ ಮೃತರಾದ ಕೊಡವರ ಆತ್ಮಕ್ಕೆ ಶಾಂತಿ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ ಸಿ) ಸಂಘಟನೆ ವತಿಯಿಂದ ಮಡಿಕೇರಿ ಕೋಟೆ, ನಾಲ್ಕುನಾಡು ಅರಮನೆ ಆವರಣ ಮತ್ತು ದೇವಟ್ ಪರಂಬುವಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಮೃತ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ನಮಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಶಾಶ್ವತ ಸ್ಮಾರಕ ನಿರ್ಮಾಣಕ್ಕಾಗಿ ಒತ್ತಾಯಿಸಿದರು.
ಪಟ್ಟಮಾಡ ಲಲಿತಾ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಬಿ.ಎಂ.ಪಾರ್ವತಿ, ಕೂಪದಿರ ಪುಷ್ಪ ಮುತ್ತಣ್ಣ, ಅಜಿನಿಕಂಡ, ಎಂ.ಬಾಳಪ್ಪಾ ಮುತ್ತಣ್ಣ, ಅಜಿನಿಕಂಡ ಇನಿತ, ಅರೆಯಡ ಗಿರೀಶ್, ಚಂಬಂಡ ಜನತ್, ಬೇಪಡಿಯಂಡ ದಿನು, ಕಾಟುಮಣಿಯಂಡ ಉಮೇಶ್, ಅಪೆಯಂಗಡ ಮಾಲೆ ಪೂಣಚ್ಚ, ಕಿರಿಯಮಾಡ ಶರೀನ್, ಬೊಟ್ಟಂಗಡ ಗಿರೀಶ್, ಬಡುವಂಡ ವಿಜಯ್, ಕೂಪದಿರ ಸಾಬು ತಮ್ಮಯ್ಯ, ಮೇದೂರ ಕಂಟಿ ದೇವಾ ನಾಣಿಯಪ್ಪ, ನಾಪಂಡ ಅರುಣ್, ಮಂದಪಂಡ ಮನೋಜ್, ಮಂದಪಂಡ ಸೂರಜ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!