ಮೇಷ
ಸಂವಹನದ ಕೊರತೆಯಿಂದ ಭಿನ್ನಾಭಿಪ್ರಾಯ ಉಂಟಾದೀತು. ತಪ್ಪು ಗ್ರಹಿಕೆ ನೀಗಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.
ವೃಷಭ
ಆತ್ಮೀಯರಲ್ಲಿ ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಮೌನವಾಗಿ ಸಹಿಸ ಬೇಕಾಗುವುದು. ವಿವಾದಕ್ಕೆ ಹೋಗದಿರಿ.
ಮಿಥುನ
ನಿರಾಳ ದಿನ. ಹೆಚ್ಚು ಕಾರ್ಯದೊತ್ತಡ ಇರುವುದಿಲ್ಲ. ಕುಟುಂಬಸ್ಥರ ಸಂಗಡ ಕಾಲ ಕಳೆಯುವ ಅವಕಾಶ. ಆರ್ಥಿಕ ಸ್ಥಿತಿ ಉತ್ತಮ.
ಕಟಕ
ಸಂತೋಷ, ಸಮಾಧಾನದ ದಿನ. ನೀವು ನಿರೀಕ್ಷಿಸಿದ ಕಾರ್ಯ ಈಡೇರಿಕೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸೌಹಾರ್ದ.
ಸಿಂಹ
ಆಸ್ತಿ ಅಥವಾ ಮನೆ ಖರೀದಿಗೆ ಮನ ಮಾಡಿದ್ದರೆ ಪೂರಕ ಬೆಳವಣಿಗೆ. ನಿಮ್ಮ ಇಚ್ಛೆಯಂತೆ ನೆರವೇರುವುದು. ಕೌಟುಂಬಿಕ ಸೌಹಾರ್ದ.
ಕನ್ಯಾ
ಕೆಲವು ದಿನಗಳ ಅಶಾಂತಿ ನಿವಾರಣೆ. ಮನಸ್ಸು ನಿಶ್ಚಿಂತೆಯಾಗುವಂತಹ ಬೆಳವಣಿಗೆ ಉಂಟಾಗುವುದು. ನಿಮ್ಮ ವೃತ್ತಿಯಲ್ಲಿ ವಿಶ್ವಾಸ ವೃದ್ಧಿ. ಕೌಟುಂಬಿಕ ಶಾಂತಿ.
ತುಲಾ
ನಿಮ್ಮ ವರ್ತನೆ, ಸಾಧನೆಗಳು ಇತರರನ್ನು ಪ್ರಭಾವಿಸುತ್ತವೆ. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು. ಮನೆಯಲ್ಲಿ ನೆಮ್ಮದಿ.
ವೃಶ್ಚಿಕ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು. ಸಮಾಧಾನದಿಂದ ನಿಭಾಯಿಸಿ. ಕೋಪತಾಪ ಒಳಿತಲ್ಲ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.
ಧನು
ಯಾವುದೇ ಕಾರ್ಯವಾದರೂ ನಿಮಗೆ ಇಂದು ಯಶಸ್ಸು ಸಿಗಲಿದೆ. ಆಪ್ತರ ಜತೆಗಿನ ವಿರಸ ನಿವಾರಣೆ. ಹೊಂದಾಣಿಕೆಯಿಂದ ವರ್ತಿಸಿರಿ.
ಮಕರ
ವೃತ್ತಿಯಲ್ಲಿ ಮತ್ತು ಮನೆಯಲ್ಲಿ ಕೆಲ ವಿಷಯಗಳಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕಾಗುವುದು. ಎಲ್ಲರಿಂದ ಶ್ಲಾಘನೆ ಪಡೆಯುವಿರಿ.
ಕುಂಭ
ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟು ಕೊರಗುವಿರಿ. ಅದನ್ನು ಆಪ್ತರ ಜತೆ ಹಂಚಿಕೊಂಡರೆ ನಿರಾಳವಾದೀತು. ಆರೋಗ್ಯ ಸುಧಾರಣೆ.
ಮೀನ
ನಿಮ್ಮ ಸಾಮರ್ಥ್ಯದ ಅಭಿವ್ಯಕ್ತಿಗೆ ಅವಕಾಶ ಸಿಗುವುದು. ಸಮಾನಮನಸ್ಕ ವ್ಯಕ್ತಿಗಳ ಜತೆ ಬೆರೆಯುವ ಅವಕಾಶ. ಆರ್ಥಿಕ ಸ್ಥಿರತೆ.