ದಿನಭವಿಷ್ಯ: ಲಾಭದಾಯಕ ದಿನ, ಇಂದು ಈ ರಾಶಿಯವರ ಮೇಲೆ ಲಕ್ಷ್ಮಿ ಕೃಪೆ ಇರಲಿದೆ

ಮೇಷ
ಕುಟುಂಬಸ್ಥರ  ಭಾವನೆಗಳನ್ನು ಗೌರವಿಸಿ.  ನಿಮ್ಮ ಅಭಿಪ್ರಾಯ, ಮಾತು  ಮನಸ್ಸನ್ನು ನೋಯಿಸದಿರಲಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಇರಲಿ.

ವೃಷಭ
ವೈಯಕ್ತಿಕ ಹಿತಾಸಕ್ತಿ ಈಡೇರಿಸಲು ಆದ್ಯತೆ ಕೊಡಬೇಕು. ಅನ್ಯರ ಸೇವೆ ಮಾಡುವುದಕ್ಕೇ ಆಸಕ್ತಿ ವಹಿಸಿದರೆ ಕುಟುಂಬಸ್ಥರ ಕೋಪ ಎದುರಿಸುವಿರಿ.

ಮಿಥುನ
ನಿಮ್ಮ ಸಾಮರ್ಥ್ಯಕ್ಕೆ ಎಟುಕದ ವಿಷಯಕ್ಕೆ ಕೈಚಾಚದಿರಿ. ನಿರಾಶೆಯಾದೀತು.  ಆಪ್ತರೆನಿಸಿದವರೇ  ಇಂದು ನಿಮ್ಮಿಂದ ದೂರ ಸರಿಯಬಹುದು.

ಕಟಕ
ಕೌಟುಂಬಿಕ ಸಮಾಧಾನ. ಆದರೆ  ವೃತ್ತಿಯಲ್ಲಿ ಒತ್ತಡ ಅನುಭವಿಸುತ್ತೀರಿ. ಸಹೋದ್ಯೋಗಿಗಳ ಅಸಹಕಾರ. ಆರೋಗ್ಯ ಸಮಸ್ಯೆಹೆಚ್ಚಬಹುದು. ಸಹನೆ ಇರಲಿ.

ಸಿಂಹ
ನಿಮ್ಮ ವರ್ತನೆ ಕೆಲವರ ಮನಸ್ಸು ನೋಯಿಸ ಬಹುದು. ಇದರಿಂದ ಸಂಬಂಧದಲ್ಲಿ ಏರುಪೇರು. ಹಣದ ವಿಷಯದಲ್ಲಿ ಜಿಗುಟು ನಿಲುವು ಒಳಿತಲ್ಲ.

ಕನ್ಯಾ
ದೂರವಾಗಿದ್ದ  ಆಪ್ತರೊಂದಿಗೆ ಮತ್ತೆ ಸೇರಿಕೊಳ್ಳುತ್ತೀರಿ. ಅವರ ಸಂಗದಲ್ಲಿ ಸಂತೋಷ. ವದಂತಿ ಹರಡುವ ಜನರಿಂದ ದೂರವಿರಿ. ಆರ್ಥಿಕ ಒತ್ತಡ.

ತುಲಾ
ಹೊಸ ಅವಕಾಶ ಒದಗಿಬರಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಭವಿಷ್ಯದ ಕುರಿತಾದ ಅನಿಶ್ಚಿತತೆ ಇಂದು ಕೊನೆಗೊಂಡೀತು.

ವೃಶ್ಚಿಕ
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಬಳಿಕ ತಾನೇತಾನಾಗಿ ಪರಿಹಾರ. ಇತರರಿಗೆ ನೆರವು ನೀಡಲು ಮನ ಮಾಡುತ್ತೀರಿ. ಆರ್ಥಿಕ ಸುಧಾರಣೆ.

ಧನು
ಭಾವನಾತ್ಮಕ ಏರುಪೇರು ಅನುಭವಿಸುವಿರಿ.ಅದಕ್ಕೆ ಕಾರಣ ನಿಮ್ಮ ಆಪ್ತರ ನಡೆನುಡಿ. ಅವರು ಇತರರ ಬಗ್ಗೆ ಕಾಳಜಿ ತೋರುವುದನ್ನು ನಿಮಗೆ ಸಹಿಸಲಾಗದು.

ಮಕರ
ಮನೆಯಲ್ಲಿ ಕಾರ್ಯದೊತ್ತಡ. ಕೆಲ ಬಂಧುಗಳಿಂದ ಕಿರಿಕಿರಿ. ಅವರಿಂದ ಕೌಟುಂಬಿಕ ಸಮಸ್ಯೆ ಸೃಷ್ಟಿಯಾದೀತು. ಅವರನ್ನು ದೂರವಿಡಿ. ವ್ಯಯ ಅಧಿಕ.

ಕುಂಭ
ಕಾಲಮಿತಿಯಲ್ಲಿ  ಕಾರ್ಯ ಪೂರೈಸ ಬೇಕಾದ ಒತ್ತಡ.  ಮಿತ್ರರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಕೌಟುಂಬಿಕ ಒತ್ತಡ ಹೆಚ್ಚುವುದು.

ಮೀನ
ಆಪ್ತರ ಜತೆ ಭಾವನೆ  ಹಂಚಿಕೊಳ್ಳುವಾಗ ಎಚ್ಚರ ವಹಿಸಿ. ಕೆಲ ವಿಷಯ ಬಹಿರಂಗವಾದರೆ ಹಾನಿಯಾದೀತು. ವೃತ್ತಿಯಲ್ಲಿ ಏರುಪೇರು ಎದುರಿಸುವಿರಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!