ದಿನಭವಿಷ್ಯ: ಕುಬೇರನ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಉತ್ತಮ ದಿನ

ಮೇಷ
ವೃತ್ತಿ ಮತ್ತು ಸಾಮಾಜಿಕ ಕೆಲಸಗಳಲ್ಲಿ ಇಂದು ಹೆಚ್ಚು ತೊಡಗುವಿರಿ. ಆರೋಗ್ಯವು ತುಸು ಸಮಸ್ಯೆ ಒಡ್ಡೀತು. ಒತ್ತಡದ ಬದುಕಿನಿಂದ ಹೊರಬನ್ನಿ.

ವೃಷಭ
ನಿಮ್ಮ ಚಿಂತನೆ, ನಿಲುವು ಅಭಿವ್ಯಕ್ತಿಸಲು ಸಕಾಲ. ಭಾವನೆಗಳನ್ನು ಮುಚ್ಚಿಟ್ಟು ಕೂರಬೇಡಿ. ಅದನ್ನು ಹೊರಹಾಕಿ. ಪ್ರೀತಿಯ ಭಾವ ಆವರಿಸಬಹುದು.

ಮಿಥುನ
ನಿಮ್ಮ ಖಾಸಗಿ ವಿಷಯಕ್ಕೆ ಸಂಬಂಧಿಸಿ ತೀರಾ ಭಾವುಕರಾಗಿ ವರ್ತಿಸುವಿರಿ. ಅನಪೇಕ್ಷಿತ ಪ್ರಸಂಗವು ನಿಮ್ಮನ್ನು ಅಚ್ಚರಿಗೆ ತಳ್ಳಬಹುದು.

ಕಟಕ
ಕೆಲವು ವಿಷಯ ಮುಚ್ಚಿಟ್ಟುದ್ದಕ್ಕೆ ಆಪ್ತರು ನಿಮ್ಮ ಮೇಲೆ ಕೋಪಿಸಿಕೊಂಡಾರು. ಅವರನ್ನು ಸಮಾಧಾನ ಮಾಡುವುದೇ ನಿಮ್ಮ ಕಾರ್ಯವಾಗುವುದು.

ಸಿಂಹ
ನಿಮ್ಮಿಂದ ಸಾಧ್ಯವಾಗದ ಕೆಲಸಕ್ಕೆ  ಆಶ್ವಾಸನೆ ಕೊಡಲು ಹೋಗದಿರಿ. ಇಲ್ಲವಾದರೆ ಕೆಲವರ ವಿಶ್ವಾಸ ಕಳಕೊಳ್ಳುವಿರಿ.  ಆಪ್ತರ ಮನ ನೋಯಿಸಬೇಡಿ.

ಕನ್ಯಾ
ಮನೆ ಅಥವಾ  ವೃತ್ತಿಯಲ್ಲಿ ಕೆಲವರ ಮನಸ್ಸನ್ನು ಅರಿತು ವ್ಯವಹರಿಸಿರಿ. ಅವರ ಇಚ್ಛೆಗೆ ವಿರುದ್ಧವಾಗಿ ಸಾಗಿದರೆ ರೋಷ ಎದುರಿಸುವಿರಿ. ಶಾಂತಿ ದೂರವಾದೀತು.

ತುಲಾ
ಕೆಲವರ ಕಾರ್ಯವು ನಿಮಗೆ ಅಸಮಾಧಾನ ಸೃಷ್ಟಿಸಬಹುದು. ಆದರೆ ಅದರ ವಿರುದ್ಧ ರೋಷ ಕಾರದಿರಿ. ಅದು ಜಗಳಕ್ಕೆ ಕಾರಣವಾದೀತು. ಸಮಾಧಾನ ಒಳಿತು.

ವೃಶ್ಚಿಕ
ನಿಮ್ಮ ಬಾಹ್ಯ ರೂಪಕ್ಕೆ ಹೆಚ್ಚು ಪ್ರಾಮುಖ್ಯ ಕೊಡಲು ಆರಂಭಿಸುವಿರಿ. ಅದಕ್ಕೆ ಕಾರಣ ಯಾರನ್ನೋ ಮೆಚ್ಚಿಸಲು ಹೊರಡುವಿರಿ. ವಿವೇಚನೆ ಇರಲಿ.

ಧನು
ಸಂಕೀರ್ಣ ಸಮಸ್ಯೆ ನಿಮ್ಮನ್ನು ಕಾಡಬಹುದು. ಅದನ್ನು ಬೇಗನೆ ಪರಿಹರಿಸಲು ಯತ್ನಿಸಿ. ಈ ವಿಷಯದಲ್ಲಿ ವಿಳಂಬ ಧೋರಣೆ ಒಳ್ಳೆಯದಲ್ಲ.

ಮಕರ
ಹಲವಾರು ಸಮಸ್ಯೆ ಏಕಕಾಲದಲ್ಲಿ ದಾಳಿ ಇಡಬಹುದು. ಸ್ಥೈರ್ಯ ಕಳಕೊಳ್ಳದಿರುವುದು ಮುಖ್ಯ. ಅಂತ್ಯದಲ್ಲಿ ಎಲ್ಲವೂ ಸುಗಮವಾಗಿ ಪರಿಹಾರ ಕಾಣುವವು.

ಕುಂಭ
ನಿಮ್ಮ ಹಿಂದಿನ ಪರಿಶ್ರಮದ ಫಲವು ದೊರಕುವುದು. ಆದರೆ ವೃತ್ತಿ ವಿರೋಧಿಗಳು ನಿಮ್ಮ ವಿರುದ್ಧ ಕಾರ್ಯಾಚರಿಸುವರು. ಎಚ್ಚರದಿಂದಿರಿ.

ಮೀನ
ಕೆಲವು ಸಣ್ಣ ವಿಷಯ ಗಳಿಗೆ ಅನವಶ್ಯವಾಗಿ ಹೆಚ್ಚು ಚಿಂತಿಸುವಿರಿ. ವಾಸ್ತವದಲ್ಲಿ  ಅವು ಸಮಸ್ಯೆಗಳೇ ಅಲ್ಲ. ನೀವೇ ಅದನ್ನು ಸಮಸ್ಯೆಯಾಗಿಸಿದ್ದೀರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!