ದಿನಭವಿಷ್ಯ: ಇಂದು ಶುಭ ಶುಕ್ರವಾರ ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?

ಮೇಷ
ನಿಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಸದುಪಯೋಗ ಮಾಡಿಕೊಳ್ಳಿ. ಅದನ್ನು ನಿರುಪಯೋಗ ಮಾಡದಿರಿ. ಪ್ರೀತಿಯಲ್ಲಿ ಯಶಸ್ಸು

ವೃಷಭ
ಕೆಲವು ಪ್ರತಿಕೂಲ ಸನ್ನಿವೇಶಗಳು ನಿಮ್ಮ ರೋಷ, ಅಸಹನೆ ಹೆಚ್ಚಿಸಬಹುದು. ಆದರೂ  ಸಾಧ್ಯವಾದಷ್ಟು ಸಹನೆ ಕಾಯ್ದುಕೊಳ್ಳಲು ಪ್ರಯತ್ನಿಸಿ..

ಮಿಥುನ
ಇತ್ತೀಚಿನ ಕೆಲವು ವಿದ್ಯಮಾನ ನಿಮ್ಮ ನಡೆನುಡಿ ಬದಲಿಸಬಹುದು. ಆದರೆ ನೆಗೆಟಿವ್ ಚಿಂತನೆಗಳಿಗೆ ಆಸ್ಪದ ಕೊಡದಿರಿ.

ಕಟಕ
ನಿರಾಶೆಯ ದಿನ. ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗದು. ಆದರೆ ಎದೆಗುಂದದಿರಿ.ಟೀಕೆಗಳು ಬಾಳಲ್ಲಿ ಸಹಜ. ಅದನ್ನು ನಿಭಾಯಿಸಬೇಕು.

ಸಿಂಹ
ಯಾರನ್ನೂ ಕುರುಡಾಗಿ ನಂಬದಿರಿ. ವಂಚನೆಗೆ ಒಳಗಾಗುವಿರಿ. ಅವ್ಯಕ್ತ ಭಯ ಕಾಡಬಹುದು. ಭವಿಷ್ಯದ ಕುರಿತಂತೆ ಅಭದ್ರತೆಯ ಭಾವನೆ. ಕೌಟುಂಬಿಕ ವಿರಸ.

ಕನ್ಯಾ
ಅದೃಷ್ಟದ ದಿನ. ವೃತ್ತಿಯಲ್ಲಿ  ಸಫಲತೆ. ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರೆಯುವುದು. ಆರ್ಥಿಕ ಉನ್ನತಿ.

ತುಲಾ
ನೀವಿಂದು ಏಕಾಂಗಿತನ ಬಯಸುವಿರಿ. ಬೇರೆಯವರ ಜತೆ ಬೆರೆಯುವುದು ಸರಿಕಾಣದು. ಸಾಂಸಾರಿಕ ಕರ್ತವ್ಯ ಮರೆಯದಿರಿ. ಧನ ವ್ಯಯ ಹೆಚ್ಚು.

ವೃಶ್ಚಿಕ
ವೈಯಕ್ತಿಕ ಬದುಕಲ್ಲಿ ಸಮಸ್ಯೆ ಕಾಣುವಿರಿ. ಭಿನ್ನಮತ ನಿವಾರಿಸಲು ಆದ್ಯತೆ ಕೊಡಿ. ನೀವು ಸ್ವಲ್ಪ ತಗ್ಗಿಬಗ್ಗಿ ನಡೆದರೂ ಅದರಲ್ಲಿ ತಪ್ಪೇನಿಲ್ಲ. ಸಂಬಂಧ ಮುಖ್ಯ.

ಧನು
ಸಣ್ಣದೊಂದು ವಿಚಾರ ನಿಮ್ಮ ಮನಶ್ಯಾಂತಿ ಕದಡಬಹುದು. ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಲ್ಲಿ ಹಿತವಿದೆ. ಕೌಟುಂಬಿಕ ಸಹಕಾರ.

ಮಕರ
ಮಾನಸಿಕವಾಗಿ ಹೆಚ್ಚು ದೃಢತೆ ತೋರುವಿರಿ. ಹೆಚ್ಚುವರಿ ಹೊಣೆ ಬಿದ್ದರೂ ಅದನ್ನು ನಿಭಾಯಿಸುವಿರಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಕುಂಭ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಬಾಂಧವ್ಯ ವೃದ್ಧಿಗೆ ಸಕಾಲ. ಪ್ರತಿಕೂಲ ಸನ್ನಿವೇಶವನ್ನು ದಿಟ್ಟವಾಗಿ ಎದುರಿಸಿ. ಎಲ್ಲ ಸರಿಯಾಗುವುದು.

ಮೀನ
ಉಲ್ಲಾಸದ ಮನಸ್ಥಿತಿ.ಕಳೆದ ಕೆಲದಿನಗಳ ಸಮಸ್ಯೆ ಪರಿಹಾರವಾದ ನಿರಾಳತೆ. ಕೌಟುಂಬಿಕ ಭಿನ್ನಮತ ನಿವಾರಣೆ. ಬಂಧುಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!