ಮೇಷ
ಗ್ರಹಗತಿ ನಿಮಗೆ ಪೂರಕ. ಯಶಸ್ಸಿನ ಮೆಟ್ಟಿಲು ಏರುವಿರಿ. ಸಣ್ಣ ತಪ್ಪುಗಳು ಆತ್ಮೀಯ ಸಂಬಂಧ ಕೆಡಿಸದಂತೆ ಎಚ್ಚರ ವಹಿಸಿರಿ.
ವೃಷಭ
ಎಲ್ಲ ಕಾರ್ಯಗಳಲ್ಲಿ ಯಶಸ್ಸು. ಖಾಸಗಿ ಬದುಕಿನ ಮೇಲೆ ವೃತ್ತಿ ಬದುಕಿನ ಒತ್ತಡ ಬೀಳದಂತೆ ಎಚ್ಚರ ವಹಿಸಿ. ಆರ್ಥಿಕ ಉನ್ನತಿ.
ಮಿಥುನ
ವೃತ್ತಿಯಲ್ಲಿ ಉತ್ಸಾಹ. ಗುರಿ ಸಾಧಿಸಿದ್ದು ಅದಕ್ಕೆ ಕಾರಣ. ಖರ್ಚು ಹೆಚ್ಚಳದ ಚಿಂತೆ. ವಾಹನ ಚಾಲನೆಯಲ್ಲಿ ಇಂದು ತುಸು ಎಚ್ಚರ ವಹಿಸಿರಿ.
ಕಟಕ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಆರ್ಥಿಕ ಕ್ಷೇತ್ರದಲ್ಲಿ ನಿಮ್ಮ ಪಥ ಬದಲಾವಣೆಯಾಗುವ ಸಂಭವವಿದೆ.
ಸಿಂಹ
ಮುಖ್ಯ ಉದ್ದೇಶ ಈಡೇರಲಿದೆ. ವೃತ್ತಿಯಲ್ಲಿ ಅದೃಷ್ಟ. ಹಿರಿಯರ ಸಲಹೆಗೆ ಬೇಸರ ಬೇಡ. ನಿಮ್ಮ ಹಿತಾಸಕ್ತಿಯೇ ಅವರ ಉದ್ದೇಶ.
ಕನ್ಯಾ
ನಿಮ್ಮ ವರ್ತನೆ ಬದಲಿಸಿಕೊಳ್ಳಿ. ಆಮೇಲೆ ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ. ಉದ್ಯೋಗ ಬದಲಾವಣೆ ಅವಕಾಶವಿದೆ.
ತುಲಾ
ಆಮೂಲಾಗ್ರ ಪ್ರಗತಿ. ಪ್ರಸಿದ್ಧಿಯನ್ನೂ ಗಳಿಸುವಿರಿ. ವೃತ್ತಿಯ ವಾತಾವರಣ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಿ, ಯಶಸ್ಸು ಸಾಧಿಸುವಿರಿ.
ವೃಶ್ಚಿಕ
ವೃತ್ತಿಯ ಗುರಿ ಸಾಧಿಸುವಿರಿ. ಸಂಗಾತಿ ಜತೆಗೆ ಕ್ಷುಲ್ಲಕ ವಿಚಾರಕ್ಕೆ ಸಂಘರ್ಷ ಬೇಡ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಉಂಟಾಗಲಿದೆ.
ಧನು
ಸಂತೋಷ, ಸಾಮರಸ್ಯದ ದಿನ. ಉತ್ಸಾಹ ಅಧಿಕ. ಪ್ರಾಮಾಣಿಕ ಪ್ರೀತಿಗೆ ಯಶ ಸಿಗಲಿದೆ. ಆಹಾರ ಸೇವನೆ ಹಿತಮಿತವಾಗಿರಲಿ.
ಮಕರ
ಆರ್ಥಿಕ ಪರಿಸ್ಥಿತಿ ತೃಪ್ತಿಕರ. ನಿಮ್ಮ ಕೋಪ ನಿಯಂತ್ರಿಸುವುದು ಅವಶ್ಯ. ಇಲ್ಲವಾದರೆ ಸಂಘರ್ಷದ ಸ್ಥಿತಿ ನಿರ್ಮಾಣವಾದೀತು. ಬಂಧುಗಳ ಕಿರಿಕಿರಿ.
ಕುಂಭ
ಧೈರ್ಯ ಮತ್ತು ಬದ್ಧತೆಯಿಂದ ಕಾರ್ಯ ನಿರ್ವಹಿಸಿ. ಇದು ಗುರಿ ಸಾಧನೆಗೆ ನೆರವಾಗಲಿದೆ. ವಿವಾಹ ನೆಂಟಸ್ತನ ಕೂಡಿಬಂದೀತು.
ಮೀನ
ನಿಮ್ಮ ಪ್ರಯತ್ನದಿಂದ ಈ ದಿನವನ್ನು ಫಲಪ್ರದ ಗೊಳಿಸಬಹುದು. ನಿಷ್ಕ್ರಿಯತೆ ತೊಡೆಯಿರಿ. ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿ.