ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಟ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾದ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತೆರವುಗೊಳಿಸಲು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಆದೇಶಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚಿಸಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳು ಅಥವಾ ರಸ್ತೆಗಳಲ್ಲಿ ಇರುವಂತಹ ಮರಗಳ ಸುತ್ತ ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾದ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೂಡಲೇ ತೆರವುಗೊಳಿಸಬೇಕು. ಜೊತೆಗೆ ಕಿರಿದಾದ ರಸ್ತೆಗಳು ಮತ್ತು ಮಾರ್ಗಗಳಲ್ಲಿ, ಸಾಧ್ಯವಾದಷ್ಟು, ಮರಗಳ ಸುತ್ತಲೂ ಕನಿಷ್ಠ 1 ಚದರ ಮೀಟರ್‌ನಷ್ಟು ಡಾಂಬರು ಹಾಕದ ಅಥವಾ ಕಚ್ಚಾ ಪರಿಣಾಮಕಾರಿ ಪ್ರದೇಶವನ್ನು ಬಿಡಲು ಆದೇಶಿಸಿದ್ದಾರೆ.
ಪಾಪ ಐ ಎ ಎಸ್ ಅಧಿಕಾರಿಗೆ ಸಾರ್ವಜನಿಕರ ಹಿತ ಮುಖ್ಯ ಎಂದು ತಿಳಿದಿಲ್ಲ ಎನಿಸುತ್ತದೆ.
Why Bbmp chopping trees. Taking huge tax not maintaining
agedtrees
Entire bengaluru roads are filled with garbage due to heavy storm wind garbage thrown on peoples walking on the roads please called bengaluru development minister mr GARBAGE KUMAR to make city round for one week by walking tben atleast he can able to ascertain the worst situation of bengaluru 😡🤔🥺😔🤭🙄