Monday, July 4, 2022

Latest Posts

Pregnancy ನಂತರ ದೇಹದ ತೂಕ ಇಳಿಸೋಕೆ ಇಲ್ಲಿದೆ ಸಿಂಪಲ್ ಡಯಟ್ ಪ್ಲಾನ್

ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರು ಅವರ ತೂಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮಗುವಾದ ಬಳಿಕ ಅವರ ದೇಹದಲ್ಲಿ ಅನೇಕ ಬದಲಾವಣೆಗಳಿಂದಾಗಿ ತೂಕ ಹೆಚ್ಚಾಗಿರುತ್ತದೆ. ಆದರೆ ಪ್ರೆಗ್ನೆನ್ಸಿ ಬಳಿಕ ತೂಕ ಇಳಿಸೋಕೆ ಇಲ್ಲಿದೆ ಸಿಂಪಲ್ ಡಯಟ್ ಚಾರ್ಟ್..

ಎದೆಹಾಲು ಕುಡಿಸಿ: ಮಗುವಿಗೆ ಎದೆ ಹಾಲು ಕೊಡುವುದರಿಂದ ದೇಹದಲ್ಲಿನ ಕ್ಯಾಲೊರಿಸ್ ಕಡಿಮೆಯಾಗುತ್ತದೆ. ಇದರಿಂದ ದೇಹ ಸುಂದರವಾಗಿರಲು ಸಹಾಯ ಮಾಡುತ್ತದೆ.

ನಾರಿನಾಂಶ ಇರಲಿ: ನೀವು ಸೇವಿಸುವ ಆಹಾರದಲ್ಲಿ ಹೆಚ್ಚು ನಾರಿನಾಂಶವಿರಲಿ. ಇದರಿಂದ ಜೀರ್ಣಕ್ರಿಯೆ ಸುಗಮವಾಗಿ ದೇಹದ ತೂಕ ಕಡಿಮೆಯಾಗುತ್ತದೆ.

ಆಗಾಗ ತಿನ್ನಿ: ದಿನದಲ್ಲಿ ಕೇವಲ 3 ಸಲ ಊಟ ಮಾಡುವ ನಿಯಮವನ್ನು ಬದಿಗಿಟ್ಟು ಹಸಿವಾದಾಗ ಆರೋಗ್ಯಕರ ಆಹಾರಗಳನ್ನು ಸೇವಿಸಬಹುದು. ಮನೆಯಿಂದ ಹೊರಗೆ ಇದ್ದಾಗ ತರಕಾರಿ, ಹಣ್ಣುಗಳು, ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಹುದು.

ಸಕ್ಕರೆ ಬೇಡ: ಮಗುವಿನ ಜನನವಾದ ಮೇಲೆ ಹೆಚ್ಚು ಸಿಹಿ ಪದಾರ್ಥಗಳು ಅಥವಾ ಸಕ್ಕರೆಯನ್ನು ಬಳಸಬೇಡಿ. ಕೇಕ್, ಬಿಸ್ಕತ್, ಜ್ಯೂಸ್ ಗಳಿಂದ ಕೆಲವು ತಿಂಗಳು ದೂರವಿರಿ.

ವಾಕ್ ಮಾಡಿ: ಬಿಮ್ಮ ದೇಹವನ್ನು ಸದೃಢವಾಗಿರಿಸಲು ನಿಮ್ಮ ವೈದ್ಯರ ಸಲಹೆಯಂತೆ ಪ್ರತಿದಿನ ವಾಕ್, ಜಾಗ್ ಮಾಡೋದನ್ನು ಮರೆಯಬೇಡಿ.

ನೀರು: ಹೆಚ್ಚು ನೀರು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸೋಕೆ ಸಹಕಾರಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss