ಹೊಸ ದಿಗಂತ ಆನ್ ಲೈನ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆ ಕಾವು ಏರುತ್ತಿದ್ದು, ಇದರ ನಡುವೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಬೃಹತ್ ರ್ಯಾಲಿಯನ್ನು ನಡೆಸಿ ಮುಂದಿನ 10 ವರ್ಷಗಳ ತಮ್ಮ ಕಾರ್ಯಗಳ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ತಿರುಚ್ಚಿಯಲ್ಲಿ ಮಹತ್ವದ ರ್ಯಾಲಿಯಲ್ಲಿ ಎಂ.ಕೆ. ಸ್ಟಾಲಿನ್ ಮಹತ್ವ ತಮಿಳುನಾಡು ವಿಷನ್ ದಾಖಲೆಯನ್ನು ಬಿಡುಗಡೆ ಮಾಡಿ, ಪಕ್ಷದ ಬಾವುಟವನ್ನು ಅನಾವರಣ ಮಾಡಿದರು.
ಡಿಎಂಕೆ ವಿಷನ್ ಅನ್ವಯ, ಮುಂದಿನ 10 ವರ್ಷಗಳಲ್ಲಿ ತಮಿಳುನಾಡಿನ ಆರ್ಥಿಕತೆಯು ಬೆಳವಣಿಗೆಯನ್ನು ದ್ವಿಗುಣಗೊಳಿಸುವುದು, ತಲಾ ಆದಾಯವನ್ನು ವರ್ಷಕ್ಕೆ ನಾಲ್ಕು ಲಕ್ಷಕ್ಕೆ ದ್ವಿಗುಣಗೊಳಿಸುವುದು. ಹಸಿವು ಮುಕ್ತ ತಮಿಳುನಾಡು ನಿರ್ಮಾಣ. ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಶೇ.50 ರಿಂದ 5ಕ್ಕೆ ಇಳಿಸುವುದು.
ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅನುದಾನವನ್ನು ಮೂರರಷ್ಟು ಹೆಚ್ಚಿಸುವುದು. ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಗೃಹಿಣಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಹಾಯ ಧನ ನೀಡುವುದು ಡಿಎಂಕೆ ಪಕ್ಷದ ಪ್ರಮುಖ ಆಶ್ವಾಸನೆಗಳಾಗಿದೆ.