ಗರ್ಭಿಣಿಯರಿಗೆ ತಿನ್ನುವ ಬಯಕೆ ಹೆಚ್ಚು. ಹಾಗಂತ ಗರ್ಭಿಣಿಯರು ಸಾಮಾನ್ಯರಂತೆ ಎಲ್ಲ ಆಹಾರಗಳನ್ನೂ ಸೇವಿಸುವಂತಿಲ್ಲ. ಏಕೆಂದರೆ ಅವರು ತಿನ್ನುವ ಆಹಾರ ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಧಾರಣೆ ವೇಳೆ ಎಷ್ಟು ಮಟ್ಟಿನ ಕಾಳಜಿ ವಹಿಸಿದರೂ ಸಾಲದು. ಈ ಕೆಳಗಿನ ಹಣ್ಣಗಳನ್ನು ಗರ್ಭಿಣಿಯರು ಅಪ್ಪಿತಪ್ಪಿಯೂ ಸೇವಿಸಬೇಡಿ..
ಸೀತಾಫಲ:
ಸೀತಾಪಲವನ್ನು ಗರ್ಭಿಣಿಯರು ಹೆಚ್ಚು ಹೆಚ್ಚು ತಿನ್ನುವಂತಿಲ್ಲ. ವಾರಕ್ಕೆ ಅಥವಾ 15 ದಿನಕ್ಕೊಮ್ಮೆ ಒಂದು ತಿಂದರೆ ಸಾಕು.
ಪೇರಲೆ:
ಪೇರೆಲೆ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವಿರುತ್ತದೆ ಮತ್ತು ಸಿಪ್ಪೆಯಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತದೆ. ಹೆಚ್ಚು ಪೇರಲೆ ಹಣ್ಣನ್ನು ತಿಂದರೆ ಮಗುವಿಗೆ ಛವಿ ಆಗುವ ಸಾಧ್ಯತೆ ಇರುತ್ತದೆ.
ಪಪ್ಪಾಯ:
ಪಪ್ಪಾಯದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗಿ ಇರುತ್ತದೆ. ಇದನ್ನು ತಿಂದರೆ ಗರ್ಭಪಾತ ಆಗುವ ಸಂಭವವಿರುತ್ತದೆ. ವೈದ್ಯರೂ ಕೂಡ ಈ ಹಣ್ಣನ್ನು ತಿನ್ನದಂತೆ ಹೇಳುತ್ತಾರೆ.
ಅನಾನಸ್:
ಅನಾನಸಿನಲ್ಲಿ ಉನ್ನತ ಮಟ್ಟದ ಬ್ರೊಮೆಲೈನ್ ಅಂಶವಿದ್ದು, ಇದು ಗರ್ಭಕಂಠವನ್ನು ಮೆತ್ತಗಾಗಿಸುವುದು ಮತ್ತು ಇದರಿಂದ ಅಕಾಲಿಕ ಹೆರಿಗೆ ಆಗಬಹುದು. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನವಂತಿಲ್ಲ.
ದ್ರಾಕ್ಷಿ:
ದ್ರಾಕ್ಷಿ ಬೆಳೆಯುವಾಗ ಹೆಚ್ಚಿನ ಕೀಟನಾಶಕವನ್ನು ಬಳಸುವ ಕಾರಣದಿಂದಾಗಿ ಗರ್ಭಿಣಿಯರು ಇದನ್ನು ತಿನ್ನಬಾರದು ಎನ್ನುತ್ತಾರೆ. ಇದೂ ಕೂಡ ದೇಹದ ಉಷ್ಣತೆ ಹೆಚ್ಚಿಸುತ್ತದೆ. ಪಿತ್ತದ ಅಂಶ ಜಾಸ್ತಿ ಮಾಡುತ್ತದೆ. ಇದರಿಂದ ಗರ್ಭಿಣಿಯರಿಗೆ ವಾಂತಿ ಆಗುವ ಸಾಧ್ಯತೆ ಇರುತ್ತದೆ.
ಲೀಛಿ:
ಈ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ ಮತ್ತು ಈ ಹಣ್ಣು ತೂಕವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಿದರೆ ಹೆರಿಗೆ ಸಮಯದಲ್ಲಿ ತೊಂದರೆ ಆಗುತ್ತದೆ.