ಹೊಸದಿಗಂತ ಆನ್ ಲೈನ್ ಡೆಸ್ಕ್:
ಎಂದೂ ಮರೆಯಲಾಗದ ಸಿನಿಮಾ ನೆನಪಿರಲಿ. ಇದರ ಹೀರೋ ಪ್ರೇಮ್ ಈಗ 400 ಕೋಟಿ ರೂ ಬಜೆಟ್ ಬಹುದೊಡ್ಡ ಸಿನಿಮಾಗೆ ಕೈ ಹಾಕಿದ್ದಾರೆ.
ಈ ಹೊಸ ಸಿನಿಮಾದಲ್ಲಿ ನಟ ಪ್ರೇಮ್ ಯೋಧರಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಪ್ರೇಮಂ ಪೂಜ್ಯಂ ಸಿನಿಮಾ ನಿರ್ದೇಶಕ ಡಾ. ರಾಘವೇಂದ್ರ ಆಕ್ಷನ್ ಕಟ್ ಹೇಳಲಿದ್ದಾರೆ. ಮಫ್ತಿ, ಪ್ರೇಮಂ ಪೂಜ್ಯಂನ ಛಾಯಾಗ್ರಾಹಕರಾಗಿದ್ದ ನವೀನ್ ಅವರೇ ಈ ಸಿನಿಮಾದಲ್ಲೂ ಕೆಲಸ ಮಾಡಲಿದ್ದಾರೆ.
ಅತಿದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು, ಇದು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದ್ದು, ಕರ್ನಾಟಕದ ವೀರ ಯೋಧನ ಕಥೆಯನ್ನು ಇದರಲ್ಲಿ ಚಿತ್ರಿಸಲಿದ್ದಾರೆ.
ಸದ್ಯ ಚಿತ್ರಕ್ಕೆ ಮಾರ್ಷಲ್ ಎಂಬ ಹೆಸರು ಕೇಳಿ ಬರುತ್ತಿದೆ. ಆದರೆ ಈಗಾಗಲೇ ಈ ಹೆಸರಲನ್ನು ಟಾಲಿವುಡ್ ಹಾಗೂ ಬಾಲಿವುಡ್ ಗಳಲ್ಲಿ ಈ ಹೆಸರಿನ ಸಿನಿಮಾ ಬಂದಿದೆ. ಹಾಗಾಗಿ ಬೇರೆ ಹೆಸರನ್ನು ಶೀಘ್ರದಲ್ಲಿ ಫಿಕ್ಸ್ ಮಾಡಲು ಚಿತ್ರತಂಡ ಎದುರು ನೋಡುತ್ತಿದೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ದೊಡ್ಡ ತಾರೆಯರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.