Saturday, July 2, 2022

Latest Posts

ಸ್ಪರ್ಧಾತ್ಮಕ ಪಿಚ್​ ಸಿದ್ಧಪಡಿಸಿದ ವಾಂಖೆಡೆ ಸ್ಟೇಡಿಯಂನ ಸಿಬ್ಬಂದಿಗಳಿಗೆ 35 ಸಾವಿರ ರೂ. ನೀಡಿದ ವಿರಾಟ್- ದ್ರಾವಿಡ್​ ಬಳಗ!

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯೂಜಿಲ್ಯಾಂಡ್​ ವಿರುದ್ಧ 2ನೇ ಟೆಸ್ಟ್​ ಪಂದ್ಯವನ್ನು 372 ರನ್​ಗಳಿಂದ ಗೆದ್ದ ಭಾರತ ಕ್ರಿಕೆಟ್​ ತಂಡ ವಾಂಖೆಡೆ ಸ್ಟೇಡಿಯಂನ ಮೈದಾನ ಸಿಬ್ಬಂದಿಗಳಿಗೆ 35 ಸಾವಿರ ರೂಗಳನ್ನು ನೀಡಿದೆ. ಪಂದ್ಯ ಮೂರೇ ದಿನಗಳಲ್ಲಿ ಕೊನೆಗೊಳ್ಳದಂತೆ ಪಿಚ್​ ನಿರ್ಮಿಸಿದ್ದಕ್ಕೆ ಮೆಚ್ಚುಗೆಯ ಸಂಕೇತವಾಗಿ ವಿರಾಟ್ – ದ್ರಾವಿಡ್​ ಬಳಗ ಸಿಬ್ಬಂದಿಗೆ 35000 ರೂಪಾಯಿಗಳನ್ನು ನೀಡಿದೆ.
ಇದಕ್ಕೂ ಮೊದಲು ಕಾನ್ಪುರದ ಮೊದಲ ಟೆಸ್ಟ್​ ಪಂದ್ಯವನ್ನು 5 ದಿನಗಳ ಕಾಲ ನಡೆಯುವಂತಹ ಸ್ಪರ್ಧಾತ್ಮಕ ಪಿಚ್​ ಸಿದ್ಧಪಡಿಸಿದ್ದಕ್ಕಾಗಿ ಗ್ರೀನ್ ಪಾರ್ಕ್​ ಮೈದಾನ ಸಿಬ್ಬಂದಿಗೆ ಭಾರತದ ಕೋಚ್​ ರಾಹುಲ್ ದ್ರಾವಿಡ್​ ವೈಯಕ್ತಿಕವಾಗಿ 35 ಸಾವಿರ ರೂ ನೀಡಿದ್ದರು.
ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 325 ರನ್​ಗಳಿಸಿದರೆ, ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 62ಕ್ಕೆ ಆಲೌಟ್​ ಆಗಿತ್ತು. 2ನೇ ಇನ್ನಿಂಗ್ಸ್​ನಲ್ಲಿ ಭಾರತ 276 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು ಕಿವೀಸ್​ಗೆ ಗೆಲ್ಲಲು 540 ರನ್​ಗಳ ಬೃಹತ್ ಗುರಿ ನೀಡಿತ್ತು. ಆದರೆ ಲಾಥಮ್​ ಬಳಗ ಕೇವಲ 167ಕ್ಕೆ ಆಲೌಟ್ ಆಗುವ ಮೂಲಕ 332ರನ್​ಗಳ ಹೀನಾಯ ಸೋಲು ಕಂಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss