Thursday, October 6, 2022

Latest Posts

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಸಾಧನೆ ಮೆರೆದ ಪ್ರೇರಣಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಶಿರಸಿ/ಕಾರವಾರ:
ಫ್ರಾನ್ಸ್‌ ದೇಶದ ನಾರ್ಮಂಡಿಯಲ್ಲಿ ನಡೆದ 19ನೇ ಅಂತಾರಾಷ್ಟ್ರೀಯ ಸ್ಕೂಲ್ ಫೆಡರೇಶನ್ ಕ್ರೀಡೆಗಳಲ್ಲಿ ಶಿರಸಿ ಪಟ್ಟಣದ 16 ವರ್ಷದ ಪ್ರೇರಣಾ ನಂದಕುಮಾರ್ ಶೇಠ್ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.
ಈ ಹಿಂದೆಯೂ ಆಕೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಸ್ವರ್ಣ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯ ಮತ್ತು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ದೇಶದ ವಿವಿಧೆಡೆ ಆಯೋಜಿಸಿದ್ದ ವಿವಿಧ ಟೂರ್ನಿಗಳಲ್ಲಿ ಆಕೆ 31ಕ್ಕಿಂತ ಹೆಚ್ಚು ಪದಕ ಜಯಿಸಿದ್ದಾರೆ.
ತನ್ನ 5ನೇ ವರ್ಷದಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ ಅವರು ಇಂದು 19ರ ವಯೋಮಿತಿಯ ಸಿಂಗಲ್ಸ್ ವಿಭಾಗದಲ್ಲಿ ಐದನೇ ಸ್ಥಾನ ಹೊಂದಿದ್ದಾರೆ. ಶಿರಸಿ ಲಯನ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ನ ವಿದ್ಯಾರ್ಥಿನಿಯಾಗಿರುವ ಪ್ರೇರಣಾ, ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿಯೂ ಉತ್ತಮ ಸಾಧನೆರ ಮಾಡಿದ್ದು, ಶೇಕಡ 85 ಅಂಕ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!