ಅಧ್ಯಕ್ಷ ಯಾರಾದರೂ ಗಾಂಧಿ ನಾಯಕತ್ವದಡಿ ಕೆಲಸ: ಕಾಂಗ್ರೆಸ್ ಗೆ ಮತ್ತೆ ಮುಜುಗರ ತಂದಿಟ್ಟ ದಿಗ್ವಿಜಯ್ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿಗ್ವಿಜಯ್ ಸಿಂಗ್ ಇದೀಗ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ನೀಡಿದ ಹೇಳಿಕೆ ಬಿಜೆಪಿ ಆರೋಪಕ್ಕೆ ಪುಷ್ಠಿ ನೀಡುವಂತಿದೆ.

ಹೌದು, ಕಾಂಗ್ರೆಸ್ ಅಧ್ಯಕ್ಷ ಯಾರೇ ಆದರೂ, ನಾವೆಲ್ಲೂ ಗಾಂಧಿ ಕುಟುಂಬದ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದು, ಈ ಹೇಳಿಕೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಅಗತ್ಯತೆಯನ್ನೇ ಪ್ರಶ್ನಿಸಿದೆ.

ಈಗಾಗಲೇ ಕಾಂಗ್ರೆಸ್ ಪರಿವಾರ ಪಾರ್ಟಿ, ಗಾಂಧಿ ಕುಟುಂಬಕ್ಕೆ ಅಧಿಕಾರ ಎಂಬ ಮಾತಿನ ನಡುವೆ ಈ ಹೇಳಿಕೆ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಘೋಷಣೆ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹೈಡ್ರಾಮ, ಸಚಿನ್ ಪೈಲೆಟ್ ಆಕ್ರೋಶ ನಡುವೆ ಇದೀಗ ದಿಗ್ವಿಜಯ್ ಸಿಂಗ್, ಗಾಂಧಿ ಹಾಗೂ ನೆಹರೂ ಕುಟಂಬದ ನಾಯಕತ್ವವೇ ಅಂತಿಮ ಎಂಬ ಹೇಳಿಕೆ ಮತ್ತಷ್ಟು ಮುಜುಗರ ತಂದಿಟ್ಟಿದೆ.

‘ನಾನು ನಾಮಪತ್ರ ಸಲ್ಲಿಸಲು ದೆಹಲಿಗೆ ಆಗಮಿಸಿದ್ದೇನೆ. ನಾಮಪತ್ರ ಸಲ್ಲಿಸಿ ಬಳಿಕ ನಾನು ಭಾರತ್ ಜೋಡೋ ಯಾತ್ರೆಗೆ ಮರಳುತ್ತೇನೆ. ಹಿರಿಯ ನಾಯಕರಾದ ಎಕೆ ಆ್ಯಂಟಿನಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆಲವರ ಜೊತೆ ಚರ್ಚಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಾಂಗ್ರೆಸ್ ಪಕ್ಷ ದೇಶವನ್ನು ವಿಭಜಿಸುವುದಿಲ್ಲ. ಸಂವಿಧಾನವನ್ನು ದುರ್ಬಲಗೊಳಿಸುವುದಿಲ್ಲ. ಸದ್ಯದ ಪರಿಸ್ಥಿತಿಯಿಂದ ದೇಶವನ್ನು ಕಾಪಾಡುವುದು ಹೇಗೆ ಎಂಬುದರ ಕುರಿತು ಯೋಜನೆ ರೂಪಿಸುತ್ತೇವೆ’ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಆಪ್ತರಾಗಿರುವ ಮತ್ತಷ್ಟುನಾಯಕರ ಹೆಸರು ಕೇಳಿಬಂದಿದೆ. ಈ ಪೈಕಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಾಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ್‌ ಅವರನ್ನು ಗಾಂಧಿ ಕುಟುಂಬ ಕಣಕ್ಕಿಳಿಸುವ ಸಾಧ್ಯತೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!