Saturday, February 4, 2023

Latest Posts

ಇಂದು ಎಪಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: ಎರಡು ದಿನಗಳ ಕಾಲ ಪ್ರವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ರಾಷ್ಟ್ರಪತಿ ದ್ರೌಪದಿ ಮುರ್ಮು ಆಂಧ್ರಪ್ರದೇಶದಲ್ಲಿ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಜಯವಾಡ, ತಿರುಪತಿ ಮತ್ತು ವಿಶಾಖಪಟ್ಟಣಂನಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಅವರು ಎಪಿಗೆ ಬರುತ್ತಿರುವ ಕಾರಣ, ಅವರಿಗೆ ಅದ್ಧೂರಿ ಸ್ವಾಗತ ನೀಡಲು ಸರ್ಕಾರ ವ್ಯವಸ್ಥೆ ಮಾಡಿದೆ.

ಗನ್ನವರಂ ವಿಮಾನ ನಿಲ್ದಾಣದಲ್ಲಿ ಸಿಎಂ ಜಗನ್ ರಾಷ್ಟ್ರಪತಿ ಅವರನ್ನು ಸ್ವಾಗತಿಸಲಿದ್ದಾರೆ. ಎಪಿ ರಾಜ್ಯಪಾಲ ವಿಶ್ವಭೂಷಣ ಹರಿಚಂದನ್ ಅವರು ರಾಷ್ಟ್ರಪತಿಗಳ ಗೌರವಾರ್ಥ ಅಧಿಕೃತ ಭೋಜನಕೂಟವನ್ನು ಆಯೋಜಿಸಿದ್ದಾರೆ. ಭಾನುವಾರ ದ್ರೌಪದಿ ಮುರ್ಮು ವಿಶೇಷ ವಿಮಾನದ ಮೂಲಕ ಎಪಿಯ ವಿಜಯವಾಡ ತಲುಪಲಿದ್ದಾರೆ. ಅಲ್ಲಿಂದ ಎಪಿ ಸರ್ಕಾರ ಆಯೋಜಿಸಿರುವ ಸ್ಥಳೀಯ ರೆಸಾರ್ಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ. ಎಪಿ ಗವರ್ನರ್ ವಿಶ್ವಭೂಷಣ್ ಮತ್ತು ಸಿಎಂ ಜಗನ್ ಅಲ್ಲಿ ರಾಷ್ಟ್ರಪತಿಯನ್ನು ಸನ್ಮಾನಿಸಲಿದ್ದಾರೆ. ಬಳಿಕ ರಾಜಭವನ ತಲುಪಿ ರಾಜ್ಯಪಾಲರು ಆಯೋಜಿಸುವ ಅಧಿಕೃತ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ವಿಶೇಷ ವಿಮಾನದ ಮೂಲಕ ವಿಶಾಖಪಟ್ಟಣಂನ ನೌಕಾ ವಿಮಾನ ನಿಲ್ದಾಣದ ಐಎನ್‌ಎಸ್ ದೇಗಾ ತಲುಪುತ್ತಾರೆ. ಅಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.

ನಂತರ ವಿಶಾಖದಿಂದ ತಿರುಪತಿ ತಲುಪುತ್ತಾರೆ. ರಾತ್ರಿ ಅಲ್ಲೇ ಇದ್ದು, ಸೋಮವಾರ ಬೆಳಗ್ಗೆ ತಿರುಮಲದಲ್ಲಿ ಸ್ವಾಮಿಯ ದರ್ಶನ ಮಾಡುತ್ತಾರೆ. ನಂತರ ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಬಳಿಕ ತಿರುಪತಿಯಿಂದ ದೆಹಲಿಗೆ ಹೋಗುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!