ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಮತ್ತು ಯುಎಇ ತಮ್ಮ ಅಧಿಕೃತ ಭೇಟಿಯನ್ನು ಮುಗಿಸಿ ದೆಹಲಿಗೆ ವಾಪಸಾದ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಸಕ್ತಿಕರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೊದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಗೆ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ ನೀಡುತ್ತಿರುವ ದೃಶ್ಯಗಳನ್ನು ನೀವು ನೋಡಬಹುದು. ಪ್ರತಿ ವರ್ಷ ಜುಲೈ 14 ರಂದು, ಫ್ರಾನ್ಸ್‌ನ ರಾಷ್ಟ್ರೀಯ ದಿನವಾದ ಬಾಸ್ಟಿಲ್ ಡೇ, ಭಾರತದಲ್ಲಿ ಗಣರಾಜ್ಯೋತ್ಸವದಂತೆಯೇ ಪ್ಯಾರಿಸ್‌ನಲ್ಲಿ ವಿಶೇಷ ಮೆರವಣಿಗೆಯನ್ನು ನಡೆಸಲಾಗುತ್ತದೆ.
ಫ್ರಾನ್ಸ್ ಅಧ್ಯಕ್ಷರು ಹಂಚಿಕೊಂಡಿರುವ ವಿಡಿಯೋದಲ್ಲಿ ಉಭಯ ದೇಶಗಳ ನಾಯಕರ ನಡುವಿನ ಮಾತುಕತೆಯ ದೃಶ್ಯಗಳಿವೆ. ಮೋನಾಲಿಸಾ ಸೇರಿದಂತೆ ಹಲವು ಪ್ರಸಿದ್ಧ ಕಲಾಕೃತಿಗಳ ತವರೂರು ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ನಡೆದ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಅವರು ಬಾಸ್ಟಿಲ್ ದಿನದ ಕೊನೆಯಲ್ಲಿ ಪಟಾಕಿ ಪ್ರದರ್ಶನವನ್ನು ವೀಕ್ಷಿಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಈ ವಿಡಿಯೋದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಸೆಲ್ಫಿಯಲ್ಲಿ ಪ್ರಧಾನಿ ಮೋದಿ ಜೊತೆಗೆ ಭಾರತದ ಖ್ಯಾತ ನಟ ಆರ್. ಮಾಧವನ್ ಕೂಡ ಇದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೆಲವು ಸುಂದರ ಕ್ಷಣಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.