spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅ.14-15 ರಂದು ಲಡಾಖ್, ಕಾಶ್ಮೀರಕ್ಕೆ ರಾಷ್ಟ್ರಪತಿ ಭೇಟಿ: ಯೋಧರೊಂದಿಗೆ ದಸರಾ ಆಚರಣೆ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಕ್ಟೋಬರ್ 14 ಮತ್ತು 15 ರಂದು ಲಡಾಖ್, ಜಮ್ಮು ಮತ್ತು ಕಾಶ್ಮೀರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಲಿದ್ದು, ಗಡಿ ಕಾಯುವ ಯೋಧರೊಂದಿಗೆ ದಸರಾ ಉತ್ಸವ ಆಚರಿಸಲಿದ್ದಾರೆ.
2021ರ ಅಕ್ಟೋಬರ್ 14 ರಂದು, ರಾಷ್ಟ್ರಪತಿಗಳು ಸಿಂಧು ಘಾಟ್, ಲೇಹ್ ನಲ್ಲಿ ಸಿಂಧು ದರುಶನ, ಪೂಜೆ ನೆರವೇರಿಸಲಿದ್ದಾರೆಎಂದು ರಾಷ್ಟ್ರಪತಿ ಭವನ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಂದ್‌ ಅವರು ಸಂಜೆ ಉಧಂಪುರದಲ್ಲಿ ಸೈನ್ಯದೊಂದಿಗೆ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 15 ರಂದು ರಾಷ್ಟ್ರಪತಿಗಳು ಡ್ರಾಸಿನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಗಳಿಗೆ ಗೌರವ ಸಲ್ಲಿಸುತ್ತಾರೆ ಮತ್ತು ಅಧಿಕಾರಿಗಳು ಹಾಗೂ ಜವಾನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss