ರಾಷ್ಟ್ರಪತಿ ಚುನಾವಣೆ: ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಪ್ರಥಮ ಪ್ರಜೆಯ ಆಯ್ಕೆ ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದರು. ಸಂಸತ್ ಭವನ, ರಾಜ್ಯಗಳ ವಿಧಾನಸಭೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ.

ದೇಶದ 15ನೇ ರಾಷ್ಟ್ರಪತಿ ಆರಿಸಲು ಇಂದು ಸುಮಾರು 4,800 ಚುನಾಯಿತ ಜನ ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ.
ಮತಾದಾನ ಪ್ರಕ್ರಿಯೆ ಸಾಂಗವಾಗಿ ನೆರವೇರುತ್ತಿದ್ದು, ದೇಶಾದ್ಯಂತ ಸಂಸದರು, ಶಾಸಕರು ಮತ ಚಲಾಯಿಸುತ್ತಿದ್ದಾರೆ.

ಇದೇ ಜು. 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆದು, ಜು. 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದ್ರೌಪದಿ ಮುರ್ಮು ಎನ್‌ಡಿಎ ಅಭ್ಯರ್ಥಿಯಾಗಿ, ಯಶವಂತ ಸಿನ್ಹಾ ವಿಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!