ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒತ್ತುವರಿಯಾಗಿರುವ ಜಾಗ ಸರಕಾರದ ವಶಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಭರವಸೆ

ಹೊಸ ದಿಗಂತ ವರದಿ, ಮಡಿಕೇರಿ:

ತೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಸರ್ವೆ ನಡೆಸಿ ವಶಕ್ಕೆ ಪಡೆಯಲು
ಕ್ರಮ ಕೈಗೊಳ್ಳುವುದಾಗಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ ಭರವಸೆ ನೀಡಿದ್ದಾರೆ.
ಗೋಣಿಕೊಪ್ಪ ವೆಂಕಟಪ್ಪ ಬಡಾವಣೆಯ 7ನೇ ವಾರ್ಡ್‍ನಲ್ಲಿ ವ್ಯಕ್ತಿಯೊಬ್ಬರು ನಿಯಮಬಾಹಿರವಾಗಿ ಜೆಸಿಬಿ ಬಳಸಿ ಸರ್ಕಾರಿ ಆಸ್ತಿಗೆ
ಹಾನಿ ಮಾಡಿ ರಸ್ತೆ ನಿರ್ಮಿಸಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳ
ಪರಿಶೀಲನೆ ನಡೆಸಿದರು.
ತೋಡುಗಳ ಅಕ್ಕಪಕ್ಕದ ಪ್ರದೇಶವನ್ನು ಸರ್ವೆ ಮಾಡಿ ಅತಿಕ್ರಮಣವನ್ನು ತೆರವುಗಳಿಸುವುದಾಗಿ ಭರವಸೆ ನೀಡಿದರು.
ಜಲಮೂಲಗಳಾದ ಕೀರೆಹೊಳೆ, ಕೈಕೇರಿ ತೋಡು, ಕೈತೋಡುಗಳು ದೊಡ್ಡ ಮಟ್ಟದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದು, ಎಲ್ಲಾ ಒತ್ತುವರಿ ಜಾಗವನ್ನು ಸರ್ವೆ ಮಾಡಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದರು.
ಸಮಾಜ ಸೇವಕಿ ಕುಸುಮಾ ಚಂದ್ರಶೇಖರ್, ಪ್ರಮುಖರಾದ ಪುಳಂಜನ ಪೂವಯ್ಯ, ಶಕುಂತಲಾ ಮತ್ತಿತರರು ಹಾಜರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss