ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಕಾರವಾರ:
ಸ್ವ ಸಹಾಯ ಸಂಘಗಳ ಮೂಲಕ ಸಾಲ ನೀಡಿರುವ ಖಾಸಗಿ ಫೈನಾನ್ಸ್ ಕಂಪನಿಗಳು ಬಡ್ಡಿ ಹಣ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ನಂದನಗದ್ದಾ ಸುತ್ತ ಮುತ್ತಲಿನ ಮಹಿಳೆಯರು ಆರೋಪಿಸಿದ್ದಾರೆ.
ದಿನ ನಿತ್ಯ ದುಡಿದು ತಿನ್ನುವ ಜನರಿಗೆ ಉದ್ಯೋಗ ಇಲ್ಲದೇ ಜೀವನ ಸಾಗಿಸುವುದೇ ಕಷ್ಟಕರವಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿ ಹಣ ತುಂಬುವುದು ಕಷ್ಟಕರವಾಗಿದೆ ಆದರೂ ಸಹ ಬಡ್ಡಿ ಕಟ್ಟುವಂತೆ ತೀವ್ರ ಒತ್ತಡ ಹಾಕಲಾಗುತ್ತಿದೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಮಾತನಾಡಿ ಲಾಕ್ ಡೌನ್ ಸಮಯದಲ್ಲಿ ಬಡ್ಡಿ ಹಣ ತುಂಬುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ, ಉದ್ಯೋಗ ಇಲ್ಲದೇ ಎಲ್ಲರೂ ಕಂಗಾಲಾಗಿದ್ದಾರೆ, ಪರಿಸ್ಥಿತಿ ಸರಿಯಾದ ಪ್ರತಿಯೊಬ್ಬರೂ ಸಾಲ, ಬಡ್ಡಿಹಣ ಕಟ್ಟುತ್ತಾರೆ, ಜುಲೈ ತಿಂಗಳ ಕೊನೆಯ ವರೆಗೆ ಬಡ್ಡಿ ಕಟ್ಟಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ