Wednesday, August 10, 2022

Latest Posts

ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ವ್ಯಾಗನಾರ್, ಸ್ವಿಫ್ಟ್, ಬಲೆನೊ ಮತ್ತು ಡಿಜೈರ್‌ನಂತಹ ಜನಪ್ರಿಯ ಕಾರು ಮಾದರಿಗಳ ಹೊಂದಿರುವ ಮಾರುತಿ ಸುಜುಕಿಯ ಬೆಲೆ ಸೆ.6ರಿಂದ ಅನ್ವಯವಾಗುವಂತೆ ಸರಾಸರಿ ಶೇ.1.9ರಷ್ಟು ಏರಿಕೆಯಾಗಲಿದೆ ಎಂದು ಕಂಪನಿ ತನ್ನ ಬಿಎಸ್‌ಇ ಫೈಲಿಂಗ್ ನಲ್ಲಿ ತಿಳಿಸಿದೆ.
ಈ ಮಾದರಿಗಳ 2021ರ ಆಗಸ್ಟ್ 30ರಂದು ಕಂಪನಿ, ಕಚ್ಚಾ ಬೆಲೆಗಳ ಏರಿಕೆಯಿಂದ ಕಾರುಗಳ ಬೆಲೆ ಏರಿಸುವುದಾಗಿ ಘೋಷಿಸಿತ್ತು. ಅದರಂತೆ ಸೆ.6ರಿಂದ ಅನ್ವಯವಾಗುವಂತೆ ಆಯ್ದ ಮಾದರಿಗಳಿಗೆ ಬೆಲೆ ಏರಿಕೆ ಮಾಡಿದೆ.
ಮೊದಲು ಕಾರುಗಳ ಬೆಲೆಗಳನ್ನು ಜನವರಿಯಲ್ಲಿ 34,000 ರೂ. ಹೆಚ್ಚಿಸಲಾಗಿತ್ತು. ನಂತರ ಎಕ್ಸ್-ಶೋರೂಂ ಬೆಲೆಗಳನ್ನು ಏಪ್ರಿಲ್ ನಲ್ಲಿ ಶೇ.1.6ರಷ್ಟು ಹೆಚ್ಚಿಸಲಾಗಿತ್ತು.
ಕಳೆದ ವರ್ಷದಲ್ಲಿ ವಿವಿಧ ಒಳಹರಿವಿನ ವೆಚ್ಚಗಳ ಹೆಚ್ಚಳದಿಂದಾಗಿ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಬೆಲೆ ಏರಿಕೆ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಹೊರೆ ನೀಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss