ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಇಡೀ ನಗರ ಮದುವೆ ಮನೆಯಂತೆ ಸಿಂಗಾರಗೊಂಡಿದೆ. ಮೋದಿ ಅವರ ಆಗಮಿಸುವ ವೇಳೆ ಬರೋಬ್ಬರಿ ೮ ಕಿ.ಮೀ.ಹೂವಿನ ಮಳೆಯೇ ಹರಿದಿದೆ.
ಅತ್ತ ಮೋದಿ ಮೋದಿ ಘೋಷಣೆಯು ಮುಗಿಲನ್ನು ಮುಟ್ಟಿದ್ದರೆ , ಇತ್ತ ಶಿಳ್ಳೆ, ಚಪ್ಪಾಳೆಗಳೂ ಕೇಳಿಬಂದಿವೆ.
ಪ್ರಧಾನಿ ಆಗಮನಕ್ಕೋಸ್ಕರ ಅವರು ಸಂಚರಿಸುವ ಇಡೀ ಮಾರ್ಗವನ್ನು ಅಂದರೆ ಬರೋಬ್ಬರಿ ೮ ಕಿ.ಮೀ. ವ್ಯಾಪ್ತಿಯವರಗೆ ರಂಗೋಲಿಯಿಂದ ಚಿತ್ತಾರಗಳು ಮೂಡಿದ್ದವು. ಬಿಜೆಪಿ ಕಾರ್ಯಕರ್ತೆಯರು ಇದಕ್ಕಾಗಿ ಶ್ರಮವಹಿಸಿದ್ದು, ರಸ್ತೆಯುದ್ದಕ್ಕೂ ರಂಗೋಲಿಯನ್ನು ಬಿಡಿಸಿ ಕಣ್ಣಿಗೆ ಮುದ ನೀಡುವಂತೆ ಮಾಡಿದ್ದರು.
ಮೋದಿ ಅವರು ತಮ್ಮ ಕಾರಿನಲ್ಲಿ ರೋಡ್ ಶೋ ಮೂಲಕ ಬರುತ್ತಿದ್ದರೆ, ಬ್ಯಾರಿಕೇಡ್ ಆಚೆಗೆ ನಿಂತಿದ್ದ ಅಭಿಮಾನಿಗಳು, ಸಾರ್ವಜನಿಕರಿಂದ ಜಯಘೋಷಗಳೇ ಮೊಳಗಿದವು. ಹೂವುಗಳನ್ನು ಮೋದಿಯತ್ತ ಹಾಕಿದರು, ಪುಷ್ಪವೃಷ್ಟಿಯಲ್ಲಿ ನರೇಂದ್ರ ಮೋದಿ ಮುಳುಗಿಹೋದರು.