Thursday, August 18, 2022

Latest Posts

ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ಬೀದರ್ ಸಂಸದ ಭಗವಂತ ಖೂಬಾಗೆ ಸ್ಥಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಬೀದರ್: 

ಸತತ ಎರಡು ಬಾರಿ ಗೆದ್ದು ಸಂಸತ್ ಸೇರಿದ್ದ ಜಿಲ್ಲೆಯ ಯುವನಾಯಕ, ತಮ್ಮ ಜನಪರ ಕಾರ್ಯಗಳಿಂದಾಗಿ ಕ್ಷೇತ್ರದ ಜನರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರ ಶ್ಲಾಘನೆಗೆ ಪಾತ್ರರಾದ ಸಂಸದ ಭಗವಂತ ಖೂಬಾ ಅವರಿಗೆ ಪಕ್ಷ ನಿಷ್ಠೆ, ಕ್ಷೇತ್ರದಲ್ಲಿ ಮಾಡಿರುವ ಜನಪರ ಕಾರ್ಯಗಳ ಫಲವಾಗಿ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಲಭಿಸಿದೆ.
2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿ ಚುನಾವಣೆ ಎದುರಿಸಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಧುರೀಣ ಮಾಜಿ ಮುಖ್ಯಮಂತ್ರಿ ಮಾಜಿ ಸಂಸದ ಸದಸ್ಯ ಧರ್ಮಸಿಂಗ್ ರವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ ಭಗವಂತ ಖೂಬಾ ಅಂದಿನಿಂದ ಜಿಲ್ಲೆಯಲ್ಲಿ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೇಂದ್ರದ ಕಾಮಗಾರಿಗಳನ್ನು ಪುನ ಆರಂಭಿಸಿ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಜನಪರ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು ಇದರಲ್ಲಿ ಬೀದರ-ಕಲಬುರ್ಗಿ ರೈಲು ಮಾರ್ಗ, ಬೀದರನಿಂದ ಸಾರ್ವಜನಿಕ ವಿಮಾನಯಾನ ಸೇವೆ, ಜಿಲ್ಲೆಯಲ್ಲಿ ಪಾಸ್ಪೋರ್ಟ್ ಸೇವಾ ಆರಂಭ, ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಯ ಕಾರ್ಯ ಸೇರಿದಂತೆ ರೈತ, ವಂಚಿತರಿಗಾಗಿ ದುಡಿದಿದ್ದರು ಮೊದಲ ಅವಧಿಯಲ್ಲಿ ಮಾಡಿದ್ದ ಕಾರ್ಯಗಳು ಜನರ ಹಾಗೂ ಪ್ರಧಾನಿ ಮೋದಿಯವರ ಮನ್ನಣೆಗೂ ಪಾತ್ರವಾಗಿತ್ತು ಇದರ ಫಲವಾಗಿ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ರಾಜ್ಯ ಮಟ್ಟದ ನಾಯಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಚಿವ ಈಶ್ವರ ಖಂಡ್ರೆ ಅವರಿಗೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿ ಮತ್ತೇ ಸಂಸತ್ ಸೇರಿದರು. ತಾವು ಅಂದುಕೊಂಡಿದ್ದ ಕಾಮಗಾರಿಗಳ ಮುಂದುವರೆಸಲು ಕ್ಷೇತ್ರದ ಜನರ ಸಹಕಾರ ಅವರಿಗೆ ಸಿಕ್ಕಿತ್ತು ಅಲ್ಲಿಗೆ ನಿಲ್ಲದ ಅವರು ಜಿಲ್ಲೆಯ ಅನೇಕ ವರ್ಷಗಳ ಬೇಡಿಕೆಯಾದ ವಿಕಾರಾಬಾದ್-ಪರಳಿ ಬೀದರ ಮುಖಾಂತರ ರೈಲ್ವೆ ಲೈನ್ ವಿದ್ಯುತ್ತಿಕರಣ ಕಾರ್ಯಕ್ಕೆ ಚಾಲನೆ ನೀಡಿದರು. ಹಾಗೂ ಬೀದರ-ಮಚಲೀಪಟ್ಟಣಂ, ಬೀದರ-ಮುಂಬೈ ಹೊಸ ರೈಲು ಆರಂಭ, ಹೀಗೆ ಅನೇಕ ಜಿಲ್ಲೆಗೆ ಅಭಿವೃದ್ಧಿಗೆ ಪೂರಕ ಜನಪರ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ ಇವರ ಪಕ್ಷ ನಿಷ್ಠೆ, ಜನಮನ್ನಣೆ ಕಂಡು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಹಾಗೂ ಕೇಂದ್ರದ ನಾಯಕರಲ್ಲಿ ತಮ್ಮ ಕಾರ್ಯಗಳಿಂದಾಗಿ ಸಾಧಾರಣ ಕಾರ್ಯಕರ್ತನಿಂದ ಸಂಸದನಾಗಿ ಬೆಳೆದ ಇಂದಿಗೂ ಜನರಿಗೆ ಹತ್ತಿರವಿರುವ ಅಪೇಕ್ಷೆ ರಹಿತವಾಗಿ ಕ್ಷೇತ್ರದ ಜನರ ಒಳಿತಿಗಾಗಿ ಹಾಗೂ ಪಕ್ಷವನ್ನು ಬಲಪಡಿಸಲು ದುಡಿಯುತ್ತಿರುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟದಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಸಂಸದ ಭಗವಂತ ಖೂಬಾ ಅವರಿಗೆ ಸಚಿವ ಸ್ಥಾನ ಲಭಿಸಿದೆ.
ಗುತ್ತಿಗಾರನಾಗಿ ಅನೇಕರಿಗೆ ಉದ್ಯೋಗದಾತರಾಗಿದ್ದ ಇವರು ಲೋಕಸಭಾ ಸದಸ್ಯರಾದ ಮೇಲೆ ಜಿಲ್ಲೆಯ ಜನಮನ್ನಣೇಯ ನಾಯಕರಾಗಿ ಗುರುತಿಸಿಕೊಂಡವರು ಇದೀಗ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದಕ್ಕೆ ಜಿಲ್ಲೆಯ ಬಿಜೆಪಿ ಘಟಕದಲ್ಲಿ ಹರ್ಷದ ವಾತಾವರಣ ಇದ್ದು ಕಾರ್ಯಕರ್ತರೆಲ್ಲ ಸಿಹಿ ಹಂಚಿ ಸಂಭ್ರಮಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ, ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!