Friday, August 12, 2022

Latest Posts

ಪ್ರಧಾನಿ ಮೋದಿ ಜನ್ಮದಿನ: ಅ.7ರವರೆಗೆ ಸಮರ್ಪಣಾ ಅಭಿಯಾನ

ದಿಗಂತ ವರದಿ ಚಿಕ್ಕಮಗಳೂರು :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ 20 ದಿನಗಳ ಕಾಲ ಜಿಲ್ಲಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಜೊತೆಗೆ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾದ 20ನೇ ವಾರ್ಷಿಕೋತ್ಸವ ಹಿನ್ನಲೆ ಜಿಲ್ಲಾ ಹಾಗೂ ತಾಲ್ಲೂಕಿನ ಬೂತ್ ಹಾಗೂ ಮಂಡಲದಲ್ಲಿ 20 ಕ್ಕೂ ಹೆಚ್ಚು ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯವಾಗಿ ಸೆ.17 ಬೃಹತ್ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಾದ್ಯಂತ 70 ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ವಿಶೇಷವಾಗಿ ದಿವ್ಯಾಂಗರಿಗೆ ಉಪಯುಕ್ತ ಸಲಕರಣೆಗಳ ವಿತರಣೆ, ಆರೋಗ್ಯ ತಪಾಸಣಾ ಶಿಬಿರ, ಕೊಳಗೇರಿಗಳು, ಅನಾಥಾಶ್ರಮ ವೃದ್ಧಾಶ್ರಮಗಳಲ್ಲಿ ಹಣ್ಣು ಹಂಪಲು ವಿತರಣೆ, ಮಹಿಳಾ ಮೋರ್ಚಾದಿಂದ ಪಡಿತರ ಚೀಲಗಳ ವಿತರಣೆ, ಯುವ ಮೋರ್ಚಾದಿಂದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗಾಂಧಿ ಜಯಂತಿಗೆ ವಿವಿಧ ಕಾರ್ಯಕ್ರಮ
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿಜೀಯವರ ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಬೂತ್‍ಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಉತ್ತೇಜನಗೊಳಿಸಲಾಗುವುದು, ಪ್ರಧಾನಿಗಳ ಜೀವನ ಸಾಧನೆ ಕುರಿತು ವರ್ಚುಯಲ್ ಪ್ರದರ್ಶನ ಏರ್ಪಡಿಸಲಾಗುವುದು ಸಣ್ಣ ಕುಶಲಕರ್ಮಿಗಳಿಗೆ, ಖಾದಿಗೆ ಪೆÇ್ರೀತ್ಸಾಹ, ಮತ್ತಿತರ ಚಟುವಟಿಕೆಗಳನ್ನು ಮೂಲಕ ವಿಶೇಷ ಗೌರವ ನೀಡಲಾಗುವುದು ಎಂದು ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಜೊತೆಗೆ ಗಾಂಧಿ ತತ್ವ ಮತ್ತು ಸಿದ್ಧಾಂತದ ಕುರಿತಾಗಿ ಸಾಮಾಜಿಕ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು, ಆತ್ಮ ನಿರ್ಭರ ಭಾರತ ಕುರಿತಾಗಿ ಸಮ್ಮೇಳನ ವಿಚಾರಗೋಷ್ಠಿ ಆಯೋಜಿಸಲಾಗುವುದು ಪ್ಲಾಸ್ಟಿಕ್ ಬಳಕೆ ತ್ಯಜಿಸಲು ವ್ಯಾಪಕ ಪ್ರಚಾರ ನಡೆಸಲಾಗುವುದು, ನಗರದ ವಿವಿಧ ವೃತ್ತಗಳಲ್ಲಿರುವ ಮೂರ್ತಿಗಳ ಸುತ್ತ ಸ್ವಚ್ಛತೆಯನ್ನು ಮಾಡಿ ಪರಿಸರ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಂ.ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ
ಸೆ. 25 ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 105 ನೇ ಜಯಂತಿ ಅಂಗವಾಗಿ ಬೂತ್ ಮಟ್ಟದಲ್ಲಿ ದೀನ್ ದಯಾಳ್ ಅವರ ಭಾವಚಿತ್ರ ಅಥವಾ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುವುದು. ಜೊತೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಲಾಗಿದೆ ಎಂದರು.
ಬೂತ್ ಮಟ್ಟದಲ್ಲಿ ಆಯೋಜಿಸಬೇಕಾದ ಆರು ಕಾರ್ಯಕ್ರಮಗಳಲ್ಲಿ ಪಂಡಿತ್ ದೀನ್ ದಯಾಳ್ ಜನ್ಮದಿನಾಚರಣೆಯೂ ಒಂದಾಗಿದೆ. ಪ್ರತಿಯೊಂದು ಬೂತಿನಲ್ಲಿ ದೀನ್‍ದಯಾಳ್ ಜೀ ಅವರ ಭಾವಚಿತ್ರ ಅಥವಾ ಮೂರ್ತಿಗೆ ಪುಷ್ಪಾರ್ಚನೆ ಮತ್ತು ಮಾಲಾರ್ಪಣೆ ಮಾಡಲಿದ್ದಾರೆ.
ಹಿರಿಯ ನಾಗರಿಕರು, ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡಾ ಸಾಧಕರು ಮುಂತಾದವರಿಗೆ ಸನ್ಮಾನ, ಕ್ರೀಡಾ ಚಟುವಟಿಕೆಗಳ ಆಯೋಜನೆ, ಸಸಿ ನೆಡುವಿಕೆ, ನೈರ್ಮಲ್ಯ ಮತ್ತು ಸ್ವಚ್ಛತಾ ಅಭಿಯಾನ ಈ ರೀತಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಆಯೋಜಿಸಲಿದ್ದೇವೆ ಎಂದರು.
ಜಿಲ್ಲೆಯ ಎಲ್ಲಾ ಮಂಡಲ ಕೇಂದ್ರಗಳಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಹಿಂದುಳಿದ ವರ್ಗದ ಕಾಲೋನಿಗಳಲ್ಲಿ ಅಂತ್ಯೋದಯದ ಪರಿಕಲ್ಪನೆ ತಿಳಿಸಲಾಗುವುದು. ಮಂಡಲದಲ್ಲಿ ವಿವಿಧ ಕ್ಷೇತ್ರಗಳÀಲ್ಲಿ ಸಾಧನೆ ಮಾಡಿರುವ ಕನಿಷ್ಟ ಇಬ್ಬರನ್ನು ಸನ್ಮಾನಿಸಲಾಗುವುದು. ಪಕ್ಷದ ಸಿದ್ಧಾಂತ ಮತ್ತು ಪಂ. ದೀನ್‍ದಯಾಳ್ ಉಪಾಧ್ಯಾಯರ ಜೀವನ ಮತ್ತು ಧ್ಯೇಯದ ಕುರಿತು ಜಿಲ್ಲಾ ಮಟ್ಟದಲ್ಲಿ ವಚ್ರ್ಯುವಲ್ ಸಭೆಗಳನ್ನು ಆಯೋಜಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸುಧೀರ್ ಡಿ. ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss