Friday, July 1, 2022

Latest Posts

ಬ್ರಿಟನ್ ರಾಜ ಫಿಲಿಪ್ ನಿಧನಕ್ಕೆ ಪ್ರಧಾನಿ ಮೋದಿ ಅವರು ಸಂತಾಪ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್ ರಾಜ ಫಿಲಿಪ್ (Duke of Edinburgh) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಶುಕ್ರವಾರ ಟ್ವಿಟ್ ಮಾಡಿರುವ ಪ್ರಧಾನಿ, ಈ ದುಃಖದ ಸಮಯದಲ್ಲಿ ನನ್ನ ಪ್ರಾರ್ಥನೆ ಬ್ರಿಟಿಷ್ ರಾಜಮನೆತನ ಹಾಗೂ ಬ್ರಿಟಿಷ್ ಜನರೊಂದಿಗೆ ಇರುತ್ತದೆ. ದೊರೆ ಫಿಲಿಪ್ ಅವರು ಮಿಲಿಟರಿಯಲ್ಲಿ ವಿಶಿಷ್ಟ ಹೆಸರು ಮಾಡಿದ್ದರು. ಅವರು ಸಮುದಾಯದ ಶ್ರೇಯೋಭಿವೃದ್ಧಿಗೆ ತಮ್ಮದೇಯಾದ ಕಾಣಿಕೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.
ಬ್ರಿಟನ್ ರಾಣಿ ಎರಡನೇ ಎಲಿಜೆಬತ್ ಅವರ ಗಂಡ ಫಿಲಿಪ್ ಅವರು ಇಂದು ಬಕಿಂಗ್ ಹ್ಯಾಮ್​ ಅರಮನೆಯಲ್ಲಿ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು
ಬ್ರಿಟನ್ ರಾಣಿ ಎರಡನೇ ಎಲಿಜೆಬತ್ ಅವರನ್ನು ಪಿಲಿಫ್ ಅವರು 1947 ರಲ್ಲಿ ವಿವಾಹವಾಗಿದ್ದರು. ಅವರು 4 ಮಕ್ಕಳನ್ನು, 8 ಮೊಮ್ಮಕ್ಕಳನ್ನು ಹಾಗೂ 9 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss