ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಅವರು ಬುಧವಾರ ಗುಜರಾತ್‌ಗೆ ಆಗಮಿಸಿದ್ದಾರೆ.
ಈ ಕ್ಷಣ ಘೆಬ್ರೆಯೆಸಸ್ ಅವರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) , ತುಳಸಿ ಬಾಯಿ ಎಂಬ ಹೊಸ ಹೆಸರಿನಿಂದ ಕರೆದಿದ್ದಾರೆ.
ಇದೀಗ ತಮ್ಮ ಹೊಸ ಹೆಸರಿನ ಬಗ್ಗೆ ಪ್ರತಿಕ್ರಿಯಿಸಿದ WHO ಮುಖ್ಯಸ್ಥರು ಪಕ್ಕಾ ಗುಜರಾತಿ ಹೆಸರು ನನಗಿಷ್ಟವಾಯಿತು ಎಂದಿದ್ದಾರೆ.
ಗಾಂಧಿನಗರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿದ ಘೆಬ್ರೆಯೆಸಸ್, ತುಳಸಿ ಭಾಯಿ ಎಂಬ ಹೆಸರು ನನಗೆ ಇಷ್ಟವಾಗಿದೆ ಏಕೆಂದರೆ ‘ತುಳಸಿ’ ಒಂದು ಔಷಧೀಯ ಸಸ್ಯ. ನಾನು ಇಲ್ಲಿ ವೆಲ್ನೆಸ್ ಸೆಂಟರ್ನಲ್ಲಿ ತುಳಸಿ ನೆಟ್ಟಿದ್ದೇನೆ. ಇದನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿ ಮೋದಿ ಕೇಂದ್ರ ಆಯುಷ್ ಸಚಿವಾಲಯದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ WHO ಮುಖ್ಯಸ್ಥರು ಸ್ಥಳದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಿರುವುದು ಕಾಣಬಹುದು. ನನ್ನ ಒಳ್ಳೆಯ ಸ್ನೇಹಿತೆ ತುಳಸಿ ಭಾಯೀ ನವರಾತ್ರಿಗೆ ಸಿದ್ಧರಾಗಿದ್ದಾರೆ. ಭಾರತಕ್ಕೆ ಸುಸ್ವಾಗತ, @DrTedros!” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
My good friend Tulsi Bhai is clearly well prepared for Navratri! Welcome to India, @DrTedros! https://t.co/NSOSe32ElW
— Narendra Modi (@narendramodi) August 16, 2023
ಕಳೆದ ವರ್ಷ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಈ ಹೆಸರನ್ನು ಅವರಿಗೆ ಮೊದಲು ನೀಡಲಾಯಿತು, ಅಲ್ಲಿ ಅವರು ‘ಪಕ್ಕ ಗುಜರಾತಿ’ ಹೆಸರು ನೀಡುವಂತೆ ಘೆಬ್ರೆಯೆಸಸ್ ಕೇಳಿದ್ದರು. ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ನನಗೆ ಭಾರತೀಯ ಶಿಕ್ಷಕರು ಕಲಿಸಿದರು ಮತ್ತು ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಇಂದು ಅವರು ನನ್ನಲ್ಲಿ ‘ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಹೆಸರನ್ನು ನಿರ್ಧರಿಸಿದ್ದೀರಾ?’ ಎಂದು ಕೇಳಿದರು. ಹಾಗಾಗಿ ನಾನು ಅವರನ್ನು ಗುಜರಾತಿ ಹೆಸರು ತುಳಸಿ ಭಾಯಿ ಎಂದು ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಕಳೆದ ವರ್ಷ ಹೇಳಿದ್ದರು.