ಚುನಾವಣಾ ಬ್ಯುಸಿಯ ನಡುವೆಯೂ ಪುಟಾಣಿ ಮಕ್ಕಳ ಜೊತೆ ಸಮಯ ಕಳೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ರಾಜ್ಯ ಚುನಾವಣಾ ಅಖಾಡದಲ್ಲಿ ಬಿರುಸಿನ ಪ್ರಚಾರಗಳು ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಖುದ್ದು ಪ್ರಧಾನಿ ಮೋದಿ ಅವರೇ ಮತಪ್ರಚಾರ ಮಾಡುತ್ತಿದ್ದಾರೆ .

ಇಂದು ಮುಂಜಾನೆಯಿಂದಲೇ ಬಿರುಸಿನ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ ಸಂಜೆ ಕಲಬುರಗಿ ತಲುಪಿದ್ದು, ಈ ವೇಳೆ ಜನಸೇವಕನ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಹೌದು, ಅದೇನೆಂದರೆ ಕಲಬುರಗಿಗೆ ಆಗಮಿಸಿದ ವೇಳೆ ಪ್ರಧಾನಿ ಮೋದಿ ನೇರ ಪುಟಾಣಿ ಮಕ್ಕಳ ಬಳಿ ತೆರಳಿ ಕುಶಲೋಪರಿ ಮಾತುಕತೆ ನಡೆಸಿದರು.

ಕಲಬುರಗಿಗೆ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಲು ಆಗಮಿಸಿದ ಮೋದಿ , ಅಲ್ಲಿಯೇ ನಿಂತಿದ್ದ ಮಕ್ಕಳ ಬಳಿ ತೆರಳಿ ಚೇತೋಹಾರಿ ಪ್ರಶ್ನೆಗಳನ್ನು ಕೇಳಿ ಅವರನ್ನು ಹುರಿದುಂಬಿಸಿದರು.

ಈ ವೇಳೆ ಮಕ್ಕಳಲ್ಲಿ ಮುಂದೆ ಏನಾಗುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಿದಾಗ ಮಕ್ಕಳು ನೀಡುತ್ತಿದ್ದ ಉತ್ತರ ಕೇಳಿ ಪ್ರಧಾನಿ ಮೋದಿ ಖುಷಿಪಟ್ಟರು.

ಈ ಕುರಿತು ವಿಡಿಯೋವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಂಚಿಕೊಂಡಿದ್ದು, ‘ಬಿಡುವಿಲ್ಲದ ಚುನಾವಣೆಯ ಪ್ರಚಾರದ ಕರ್ತವ್ಯದ ನಡುವೆಯೂ ದೇಶದ ಭವಿಷ್ಯದ ಪ್ರಜೆಗಳಿಗೆ ಚೇತೋಹಾರಿ ಪ್ರಶ್ನೆಗಳನ್ನು ಕೇಳಿ ಅವರನ್ನು ಹುರಿದುಂಬಿಸಿದ ವಿಶ್ವನಾಯಕ, ಭಾರತದ ಪ್ರಧಾನ ಸೇವಕ ಸನ್ಮಾನ್ಯ ಪ್ರಧಾನಿ ಶ್ರೀ @narendramodi ಕರ್ನಾಟಕದ ಕಲಬುರಗಿ ಇಂದು ಈ ಅಪರೂಪದ ಘಳಿಗೆಗೆ ಸಾಕ್ಷಿಯಾಯಿತು’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!