ಕನ್ನಡ ಭಾಷೆಗೆ ಮನಸೋತ ಪ್ರಧಾನಿ ಮೋದಿ.. ಇದೊಂದು ಸುಂದರ ಭಾಷೆ ಎಂದು ಹಾಡಿ ಹೊಗಳಿದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಕಲಿಯುವ ಮಕ್ಕಳಿಗೆ ಅನುಕೂಲವಾಗಲಿ, ಕಲಿಕೆ ಖುಷಿಯಿಂದ ಇರಲಿ ಎಂದು ಕಲೆಗಾರ ಬಾದಲ್ ನಂಜುಂಡಸ್ವಾಮಿ ಅವರು ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೆ ಹೊಂದುವ ಚಿತ್ರಗಳನ್ನು ಬಿಡಿಸಿ,ಜೋಡಿಸಿರುವ ವಿಶೇಷ ಫೋಟೊವೊಂದು ಎಲ್ಲೆಡೆ ವೈರಲ್ ಆಗಿದ್ದು, ಪ್ರಧಾನಿ ಮೋದಿ ಕೂಡ ಇದನ್ನು ಮೆಚ್ಚಿದ್ದಾರೆ.

 

ಕಿರಣ್ ಕುಮಾರ್ ಎಸ್ ಎನ್ನುವವರು ವರ್ಣಮಾಲೆ ಫೋಟೊ ಹಂಚಿಕೊಂಡಿದ್ದು, ಅದನ್ನು ಪ್ರಧಾನಿ ಮೋದಿ ರೀಟ್ವೀಟ್ ಮಾಡಿದ್ದಾರೆ. ಭಾಷೆ ಕಲಿಯುವುದನ್ನು ಮೋಜಿನ ಚಟುವಟಿಕೆ ಮಾಡೋದು ಖುಷಿಯ ವಿಷಯ, ಇದು ಸೃಜನಶೀಲ ಮಾರ್ಗವಾಗಿದೆ, ಇದು ಸುಂದರವಾದ ಕನ್ನಡ ಭಾಷೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿ ಕಲೆಯನ್ನು ಗುರುತಿಸಿದ್ದಕ್ಕಾಗಿ ಬಾದಲ್ ನಂಜುಂಡಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!