ಮೈಸೂರಿನ ಅರಮನೆ ಅಂಗಳದಲ್ಲಿ 75 ಸಾವಿರ ಮಂದಿಯೊoದಿಗೆ ಪ್ರಧಾನಿ ಮೋದಿ ಯೋಗ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊಸದಿಗಂತ ವರದಿ, ಮೈಸೂರು:

ಮೈಸೂರಿನ ಅರಮನೆ ಆವರಣದಲ್ಲಿ ಜೂನ್ 21 ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದು, ಅಂದು 70 ಸಾವಿರ ಮಂದಿ ಯೋಗಪಟುಗಳೊಂದಿಗೆ ಯೋಗಾಸನಗಳನ್ನು ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಸೋಮವಾರ ಸಂಜೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಅರಮನೆ ಅಂಗಳದಲ್ಲಿ ಅಂದು ನಡೆಯುವ ಯೋಗ ಕಾರ್ಯಕ್ರಮದಲ್ಲಿ 75 ಸಾವಿರ ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಹಾಗಾಗಿ ಎಲ್ ಇಡಿ ಸ್ಕಿçÃನ್‌ಗಳನ್ನು ಇತರೆಡೆ ಅಳವಡಿಸುವ ಮೂಲಕ ಅಲ್ಲಿ ಯೋಗದಲ್ಲಿ ಭಾಗವಹಿಸುವವರ ಸಂಪರ್ಕವನ್ನು ಜೋಡಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಕಾರ್ಯಕ್ರಮ ಸಂಬAಧ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. ಮೋದಿ ಅವರ ಅಗಮನ ಮೈಸೂರಿಗೆ ಮಾತ್ರ ಅಲ್ಲಾ ಇಡೀ ರಾಜ್ಯಕ್ಕೆ ಸಂತಸ ಮತ್ತು ಹೆಮ್ಮೆ ತರುತ್ತಿದೆ. ಅಂದು ಒಂದು ದಿನ ಮಾತ್ರ ಮೋದಿ ಅವರ ಜೊತೆ ಯೋಗ ಮಾಡುವುದಲ್ಲ, ಮೋದಿಯವರಿಂದ ಪ್ರೇರಣೆಗೊಂಡು, ಅಂದಿನಿAದ ಪ್ರತಿದಿನ ಎಲ್ಲರೂ ಯೋಗ ಮಾಡುವುದಕ್ಕೆ ಪ್ರಾರಂಭಿಸಬೇಕು ಎಂದರು.
ಭಾರತ ಹೊರತುಪಡಿಸಿದಂತೆ ವಿಶ್ವದ 140ಕ್ಕೂ ಹೆಚ್ಚು ದೇಶಗಳಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಅದರ ಪೂರ್ವ ತಾಲೀಮುಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದಾರೆ. ಭಾರತದ ಯೋಗ ದೈಹಿಕ ಹಾಗೂ ಮಾನಸಿಕ ಸ್ವಾಸ್ತ್ಯಕ್ಕೆ ಕಾಪಾಡಲು ಸಹಕಾರಿ ಎಂಬುದನ್ನು ಮನಗಂಡಿದ್ದಾರೆ ಎಂದರು.
ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ.ಮುಂದಿನ ದಿನಗಳ ದೃಷ್ಟಿಯಿಂದಲೂ ಕಲ್ಲಿದ್ದಲೂ ಸಂಗ್ರಹ ಮಾಡಿಕೊಳ್ಳುತ್ತಿದ್ದೇವೆ. ಯಾವ ಸಮಸ್ಯೆ ಉದ್ಬವವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಈವರೆಗೆ ಲೆಫ್ಟಿಸ್ಟ್ ಇತಿಹಾಸ ಪಠ್ಯದಲ್ಲಿತ್ತು. ಇನ್ಮುಂದೆ ನೈಜ ಇತಿಹಾಸ ಮಕ್ಕಳಿಗೆ ಹೇಳಲಾಗುತ್ತದೆ ಎಂದರು.
ರೋಹಿತ್ ಚಕ್ರತೀರ್ಥ ವಿಚಾರ ಮುಗಿದ ಅಧ್ಯಾಯ. ನಾಡಗೀತೆ ವಿವಾದಕ್ಕೆ ಚಕ್ರತೀರ್ಥರೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಇದನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಾಲ್ಕು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ; ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಪದವೀಧರರು, ಶಿಕ್ಷಕರು ನಮ್ಮೊಂದಿಗೆ ಇದ್ದಾರೆ. ಹಾಗಾಗಿ ನಾಲ್ಕು ಸ್ಥಾನಗಳನ್ನೂ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವಿನ ಉಡುಗೊರೆ ನೀಡಿ; ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಹಾಗಾಗಿ ಮೈಸೂರಿಗೆ ಆಗಮಿಸುತ್ತಿರುವ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರನ್ನು ಗೆಲ್ಲಿಸುವ ಮೂಲಕ ಗೆಲುವಿನ ಉಡುಗೊರೆಯನ್ನು ನೀಡಬೇಕೆಂದರು.
ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಕಾಣಸು ಕಾಣುತ್ತಿದ್ದಾರೆ. ಹಾಗಾಗಿ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದರೆ, ಕಾಂಗ್ರೆಸ್‌ನ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಮತ್ತಷ್ಟು ಹತ್ತಿರವಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್‌ಸಿಂಹ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ವಕ್ತಾರ ಎಂ.ಎ.ಮೋಹನ್, ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!