ಕಲಬುರಗಿಯಲ್ಲಿ ನಾಳೆ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಹೊಸದಿಗಂತ ವರದಿ ಕಲಬುರಗಿ: 

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 5 ಗಂಟೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ರೋಡ್ ಶೋ ಉಸ್ತುವಾರಿ ಭರತ್ ಭೋಪ್ರಾ ತಿಳಿಸಿದರು.

ನಗರದ ಬಿಜೆಪಿ ಮಾಧ್ಯಮ ವಿಭಾಗೀಯ ಕಚೇರಿಯಲ್ಲಿ ಮಾತನಾಡಿದ ಅವರು, ಇದೇ ಮೇ 2ರಂದು ನಾಳೆ ಪ್ರಧಾನಿ ಮೋದಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಬಿಜೆಪಿ ಅಭ್ಯರ್ಥಿಗಳ ಪರ ಹುಮನಾಬಾದ ರಿಂಗ್ ರಸ್ತೆ ಬಳಿ ಇರುವ ಕೆಎಂಎಫ್ ನಿಂದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ವರೆಗಿನ ಸುಮಾರು 6 ಕೀಮಿ ಬೃಹತ್ ರೋಡ್ ಶೋ ಭಾಗವಹಿಸಿಲಿದ್ದಾರೆ. ಕೆಎಂಎಫ್ ನಿಂದ ಆರಂಭವಾಗುವ ಭವ್ಯ ರೋಡ್ ಶೋ ನಗರೇಶ್ವರ ಹೈಸ್ಕೂಲ್, ಹುಮನಾಬಾದ ಬೇಸ್, ಕಿರಣಾ ಬಜಾರ್, ಬಾಂಡೆ ಬಜಾರ್, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತಕ್ಕೆ ಬಂದು ಸಮಾಪ್ತಿಗೊಳ್ಳಲಿದೆ ಎಂದು ಅವರು ವಿವರಿಸಿದರು.

ಕಲಬುರಗಿ ದಕ್ಷಿಣ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಕಲಬುರಗಿಯಲ್ಲಿ ಇದೆ ಮೊದಲಬಾರಿಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯುತ್ತಿದ್ದು, ಕಲಬುರಗಿ ಜನತೆಗೆ ಇದೊಂದು ಐತಿಹಾಸಿ ದಿನವಾಗಿದೆ. ಪ್ರಧಾನಿ ಮೋದಿ ಅವರ ಅಭಿಮಾನಿಗಳು ಸಮೀಪದಿಂದ ನೋಡುವ ಸದವಕಾಶ ಸಿಗಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ಬಿಜೆಪಿ ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ಹಿರಿಯ ಮುಖಂಡ ಶಾಮರಾವ್ ಪ್ಯಾಟಿ, ಗುಜರಾತ್ ಮಾಜಿ ಸಚಿವ ಕೇಸಿ ಪಟೇಲ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!