Saturday, August 13, 2022

Latest Posts

ಪ್ರಧಾನಿ ಮೋದಿ ಜನ್ಮದಿನ: ಸೆ.17 ರಿಂದ ಸೇವೆ, ಸಮರ್ಪಣಾ ಅಭಿಯಾನ

ದಿಗಂತ ವರದಿ ವಿಜಯಪುರ:

ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನಾಚರಣೆ ನಿಮಿತ್ತ ಸೆ.17 ರಿಂದ ಅ. 7, 2021 ರ ವರೆಗೆ ಸೇವೆ ಮತ್ತು ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿಜಿ ಜನ್ಮದಿನಾಚರಣೆ ಹಾಗೂ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ವೇಳೆಯ 20 ನೇ ವಾರ್ಷಿಕೋತ್ಸವ ಹಿನ್ನೆಲೆ, ಸೇವಾ ಹಾಗೂ ಸರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಧಾನಿ ಮೋದಿಜಿ, ದೀನ- ದಲಿತರು, ಮಹಿಳೆಯರು, ವಂಚಿತರು, ಆದಿವಾಸಿಗಳು, ರೈತರು ಸೇರಿದಂತೆ ಬಡವರ ಜೀವನ ಮಟ್ಟ ಸುಧಾರಣೆಗೆ ದಿಟ್ಟ ಹೆಜ್ಜೆ ಇಟ್ಟು, ಮೇಲ್ಪಂಕ್ತಿ ಬರೆದಿದ್ದಾರೆ ಎಂದರು.

ಅಲ್ಲದೆ ಸಮರ್ಪಣಾ ಅಭಿಯಾನ ನಿಮಿತ್ತ ಜಿಲ್ಲೆಯ 2011 ಬೂತ ಹಾಗೂ 9 ಮಂಡಲಗಳ ವತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೋದಿಜಿ ಜನ್ಮದಿನಾಚರಣೆ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಮುಖಂಡ ಬಸವರಾಜ ಬೈಚಬಾಳ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss