ಮತ್ತೊಮ್ಮೆ ಸಾಕ್ಷಿಯಾದ ಪ್ರಧಾನಿ ಮೋದಿಯ ಸರಳತೆ: ತಮ್ಮ ವೈದ್ಯಕೀಯ ವೆಚ್ಚಕ್ಕೆ ಸರ್ಕಾರದಿಂದ ಪಡೆದಿಲ್ಲ ಒಂದು ಪೈಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ರಾಜಕೀಯವಾಗಿ ತಮ್ಮದೇ ಛಾಪನ್ನು ಮೂಡಿಸಿದ್ದು, ವೈಯಕ್ತಿಕ ಜೀವನದಲ್ಲೂ ಸರಳತೆಯ ಮೂಲಕ ಎಲ್ಲರಿಗೂ ಇಷ್ಟವಾಗಿದ್ದಾರೆ .

ಇತ್ತೀಚೆಗಷ್ಟೇ ಅತ್ಯಂತ ಸರಳವಾಗಿ ತಮ್ಮ ತಾಯಿಯ ಅಂತ್ಯಕ್ರಿಯೆ ನೆರವೇರಿಸಿ, ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದ ಮೋದಿಯವರ ಬಗ್ಗೆ ಆರ್​ಟಿಐ (RTI) ಮತ್ತೊಂದು ಮಾಹಿತಿ ಸಿಕ್ಕಿದೆ .

ಅದೇನೆಂದರೆ ಪ್ರಧಾನಿ ಮೋದಿಯವರ ವೈದ್ಯಕೀಯ ವೆಚ್ಚದ ಕುರಿತು.
ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​​ಟಿಐ) ಕೇಳಲಾದ ಪ್ರಶ್ನೆಗೆ ನರೇಂದ್ರ ಮೋದಿ ಮೇ 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಾಗಿನಿಂದ ಅವರ ವೈದ್ಯಕೀಯ ಆರೈಕೆಗೆ ಒಂದು ರೂಪಾಯಿಯನ್ನು ಕೂಡ ಸರ್ಕಾರದಿಂದ ಖರ್ಚು ಮಾಡಿಲ್ಲ. ತಮ್ಮ ಎಲ್ಲ ವೈದ್ಯಕೀಯ ವೆಚ್ಚವನ್ನೂ ಮೋದಿ ಸ್ವಂತ ಹಣದಿಂದಲೇ ಭರಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ನೀಡಿದ ಉತ್ತರದಲ್ಲಿ ಇದು ಬಹಿರಂಗವಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯವು ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಯ ಆರೋಗ್ಯಕ್ಕೆ ಸರ್ಕಾರದ ಖಜಾನೆಯಿಂದ ಯಾವುದೇ ಹಣ ಖರ್ಚು ಮಾಡಿಲ್ಲ ಎಂದು ತಿಳಿಸಲಾಗಿದೆ.

ಸಾಮಾನ್ಯವಾಗಿ ಸಂಸದರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಹಲವಾರು ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ದೇಶದ ಪ್ರಧಾನಿ ಮೋದಿ ಆ ಸೌಕರ್ಯಗಳನ್ನು ಪಡೆದಿಲ್ಲ. ಪ್ರಧಾನಿ ಮೋದಿ ಅವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸ್ವಂತ ಹಣದಿಂದಲೇ ಭರಿಸುತ್ತಾರೆ, ಸರ್ಕಾರದ ಬೊಕ್ಕಸದಿಂದ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!