ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದಲ್ಲಿ ಇಂದು ದಾಖಲೆಯ ಲಸಿಕೆ ವಿತರಣೆ: ‘ವೆಲ್ ಡನ್ ಇಂಡಿಯಾ’ ಎಂದ ಪ್ರಧಾನಿ ಮೋದಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು, ವೆಲ್ಡನ್ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಂದಿನ ದಾಖಲೆ ಮುರಿದಿರುವ ಲಸಿಕೆ ಅಭಿಯಾನದ ಸಂಖ್ಯೆಯು ಸಂತಸ ತಂದಿದೆ. ಕೋವಿಡ್19 ರ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಲಸಿಕೆ ಪಡೆದವರಿಗೆ ಅಭಿನಂದನೆಗಳು ಮತ್ತು ಅನೇಕ ನಾಗರಿಕರಿಗೆ ಲಸಿಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿರುವ ಎಲ್ಲಾ ಮುಂಚೂಣಿ ಯೋಧರಿಗೆ ಅಭಿನಂದನೆಗಳು. ವೆಲ್ ಡನ್ ಇಂಡಿಯಾ!’ ಮೋದಿ ಹೇಳಿದ್ದಾರೆ.
ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ ದಾಖಲೆಯ 75 ಲಕ್ಷಕ್ಕೂ ಅಧಿಕ ಮಂದಿಗೆ ನೀಡಲಾಗಿದೆ. ವ್ಯಾಕ್ಸಿನೇಷನ್ ಗಾಗಿ ಪರಿಷ್ಕೃತ ಮಾರ್ಗಸೂಚಿಗಳೊಂದಿಗೆ ಇಂದು ಅಭಿಯಾನ ಶುರುವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss