ಕೈದಿಗಳ ಪರಾರಿ ಪ್ರಕರಣ: ಎಸ್ಕೇಪ್ ಆಗಿದ್ದ ಮಸ್ತಾನ್‌ ಕೊನೆಗೂ ಅರೆಸ್ಟ್

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ತಲೆಮರೆಸಿಕೊಂಡಿದ್ದ ಕೊನೆಯ ಕೈದಿ ಮಸ್ತಾನ್ ಕಮಲಾಪುರೆ ಅಲಿಯಾಸ್ ಮಾಸೋನನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮಸ್ತಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಸ್ತಾನ್, ಇತ್ತೀಚೆಗೆ ಮತ್ತಿಬ್ಬರು ಕೈದಿಗಳೊಂದಿಗೆ ಸೇರಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದನು. ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಹಲವು ದಿನಗಳಿಂದ … Continue reading ಕೈದಿಗಳ ಪರಾರಿ ಪ್ರಕರಣ: ಎಸ್ಕೇಪ್ ಆಗಿದ್ದ ಮಸ್ತಾನ್‌ ಕೊನೆಗೂ ಅರೆಸ್ಟ್