ಕಿತ್ತಾಟದಲ್ಲಿ ಜೈಲಿಗೇ ಬೆಂಕಿ ಇಟ್ಟ ಕೈದಿಗಳು, ಎಂಟು ಮಂದಿ ಸಜೀವದಹನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಟೆಹ್ರಾನ್‌ನ ಎವಿನ್ ಜೈಲಿನಲ್ಲಿ ಕೈದಿಗಳ ಕಿತ್ತಟದಿಂದ ಇಡೀ ಜೈಲಿಗೇ ಬೆಂಕಿ ಹಾಕಿದ್ದಾರೆ. ಅವಘಡದಲ್ಲಿ ಎಂಟು ಕೈದಿಗಳು ಸಜೀವದಹನವಾಗಿದ್ದಾರೆ.

ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಜೈಲಿಗೆ ಬೆಂಕಿ ಹತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಸಾಕಷ್ಟು ಪ್ರಕರಣಗಳಲ್ಲಿ ಜೈಲು ಸೇರಿದ್ದ ಅಪರಾಧಿಗಳು ಪರಸ್ಪರ ಜಗಳವಾಡಿದ್ದಾರೆ. ಕಿತ್ತಾಟ ತಾರಕಕ್ಕೇರಿದ್ದು, ಜೈಲಿಗೇ ಬೆಂಕಿ ಹಾಕಲಾಗಿದೆ. ದಟ್ಟ ಹೊಗೆಯಿಂದ ಉಸಿರಾಡಲು ಆಗದೇ ಅಧಿಕಾರಿಗಳು ಪರದಾಡಿದ್ದಾರೆ. ಬೆಂಕಿ ಜತೆಗೆ ಗುಂಡಿನ ಸದ್ದು ಕೂಡ ಕೇಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. ದ್ವೇಷದ ಕಾರಣದಿಂದ ಜಗಳ ಆರಂಭವಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!