ದೇಶೀಯವಾಗಿ ಅಭಿವೃದ್ಧಿಪಡಿಸಿದ ಪೃಥ್ವಿ-2 ಕ್ಷಿಪಣಿ ಯಶಸ್ವೀ ಪರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿ ಪೃಥ್ವಿ-2 ಬ್ಯಾಲಿಸ್ಟಿಕ್ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಬಾಲಸೋರ್‌ನಲ್ಲಿರುವ ITR ಲಾಂಚಿಂಗ್ ಕಾಂಪ್ಲೆಕ್ಸ್-3 ನಿಂದ ಬುಧವಾರ ರಾತ್ರಿ 7:40 ಕ್ಕೆ ಉಡಾವಣೆ ಯಶಸ್ವಿಯಾಗಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು ಅತ್ಯಂತ ನಿಖರತೆಯಿಂದ ತನ್ನ ಗುರಿಯನ್ನು ಮುಟ್ಟಿತು. ಇದೇ ಕ್ಷಿಪಣಿಯನ್ನು ಫೆಬ್ರವರಿ 21, 2018 ರ ರಾತ್ರಿ ಚಂಡಿಪುರದ ITR ನಿಂದ ಮತ್ತು ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಹ ಉಡಾವಣೆ ಮಾಡಲಾಗಿತ್ತು.

ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿ 350 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಎರಡು ಲಿಕ್ವಿಡ್ ಪ್ರೊಪಲ್ಷನ್ ಎಂಜಿನ್ ಹೊಂದಿರುವ ಪೃಥ್ವಿ-2 ಕ್ಷಿಪಣಿ 500/100 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. 9 ಮೀಟರ್ ಉದ್ದದ ಪೃಥ್ವಿ-2 ಕ್ಷಿಪಣಿ, ಏಕ-ಹಂತದ ದ್ರವ ಇಂಧನದಿಂದ ಚಾಲಿತವಾಗಿದೆ, ಇದನ್ನು ಮೊದಲು 1996 ರಲ್ಲಿ ಉಡಾವಣೆ ಮಾಡಲಾಯಿತು. ಪೃಥ್ವಿ-2, DRDO ಅಭಿವೃದ್ಧಿಪಡಿಸಿದ ಮೊದಲ ಕ್ಷಿಪಣಿಯಾಗಿದ್ದು, 2003 ರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರವೇಶಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!