spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1 ರಿಂದ ಖಾಸಗಿ ಬಸ್ ಓಡಾಟ: ಜನಸಾಮಾನ್ಯರಿಗೆ ದರ ಏರಿಕೆಯ ಬರೆ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ,ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1 ರಿಂದ ಖಾಸಗಿ ಬಸ್ ಓಡಾಟ ಆರಂಭಿಸಲಿದೆ. ಆದರೆ, ಲಾಕ್‌ಡೌನ್‌ನಿಂದ ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿ ನಲುಗಿರುವ ಜನಸಾಮಾನ್ಯರಿಗೆ ಬಸ್ ದರ ಏರಿಕೆಯ ಬರೆ ಬಿದ್ದಿದೆ.
ಬಸ್‌ಗಳಲ್ಲಿ ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು ಎಂಬ ಮಾರ್ಗಸೂಚಿ ಜಾರಿಯಲ್ಲಿರುವವರೆಗೆ ಅಥವಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ನಡೆಸಿ ನಿರ್ಧಾರ ಪ್ರಕಟಿಸುವವರೆಗೆ ಪ್ರಯಾಣಿಕರು ಶೇ.20ರಷ್ಟು ಹೆಚ್ಚುವರಿ ದರ ಪಾವತಿಸುವುದು ಅನಿವಾರ್ಯ. ಗುರುವಾರ ಖಾಸಗಿ ಸಿಟಿ ಬಸ್‌ಗಳು ಪ್ರಯಾಣ ದರ ಹೆಚ್ಚಳದೊಂದಿಗೆ ರಸ್ತೆಗೆ ಇಳಿಯಲಿವೆ.
ಈ ಹಿಂದೆ 2020ರ ಜೂ.1ರಂದು ಬಸ್ ದರ ಏರಿಕೆ ಮಾಡಲಾಗಿದ್ದು, ಮೊದಲ ಸ್ಟೇಜ್ ಮತ್ತು ಎರಡನೇ ಸ್ಟೇಜ್‌ಗೆ 10 ರೂ. ಇದ್ದ ಪ್ರಯಾಣದರ 12 ರೂ.ಗೆ ಏರಿಕೆಯಾಗಿದೆ. ಖಾಯಂ ಆಗಿ ಬಸ್ ದರ ಏರಿಕೆ ಮಾಡಬೇಕು ಎಂದು ಸಿಟಿ ಬಸ್ ಮಾಲಕರು ವಿನಂತಿಸಿದ್ದಾರೆ. ಆದರೆ, ಕೋವಿಡ್ ನಿಯಮಾವಳಿ ಜಾರಿಯಲ್ಲಿ ಇರುವವರೆಗೆ ಮಾತ್ರ ಹೆಚ್ಚುವರಿ ದರ ಪಡೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸಿಟಿ ಬಸ್ ದರ
ಸ್ಟೇಜ್- ಹಿಂದಿನ ದರ- ಹೊಸ ದರ
1-10-12
2-10-13
3-12-15
4-13-16
5-14-18
6-15-19
7-16-20
8-17-21
9-17-22
10-18-23
11-20-15
12-21-26
13-22-28
14-23-29
15-24-30

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss