ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ಲೈನ್ ಡೆಸ್ಕ್:
ಒಂದೆಡೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೆ , ಇತ್ತ ಸಾವಿನ ಪ್ರಮಾಣ ಅಧಿಕವಾಗುತ್ತಿದೆ. ನಿತ್ಯವೂ ದೊಡ್ಡ ಪ್ರಮಾಣದಲ್ಲೇ ಜನರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.
ಒಂದು ಮನೆಯ ಆಸರೆಯೇ ಜೀವಕಳೆದುಕೊಂಡರೆ ಆ ಬಳಿಕ ನಮ್ಮನ್ನು ನಂಬಿದ ಸಂಸಾರದ ಕಥೆ ಏನು ಎಂದು ಸೋಂಕಿತರಿಗೆ ಹಾಗೂ ಸೋಂಕಿತರಲ್ಲದವರಿಗೂ ಚಿಂತೆ ಕಾಡುವುದು ಸಹಜ. ಅದಕ್ಕಾಗಿ ಇಲ್ಲೊಂದು ಕಂಪನಿಯ ಉದ್ಯೋಗಿಗಳಿಗೆ ಹಾಗೆ ಆಗಬಾರದ್ದೇನಾದರೂ ಆದರೆ ತನ್ನ ಉದ್ಯೋಗಿಗಳಿಗೆ ದೊಡ್ಡ ಭರವಸೆಯನ್ನೇ ನೀಡಿದೆ.
ಹೌದು, ಇಲ್ಲೊಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಭಾರಿ ಭರವಸೆಯನ್ನೇ ನೀಡಿದ್ದು, ನಮ್ಮ ಕಂಪನಿಯ ಉದ್ಯೋಗಿ ಒಂದು ವೇಳೆ ಕೊರೋನಾಗೆ ತುತ್ತಾಗಿ ಮೃತಪಟ್ಟರೆ, ಅವರ ಕುಟುಂಬದವರಿಗೆ ಮುಂದಿನ 2 ವರ್ಷಗಳ ಕಾಲ ಆ ಉದ್ಯೋಗಿಯ ಸಂಬಳ ಸಿಗಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ಬೊರೊಸಿಲ್ ಲಿಮಿಟೆಡ್ ಕಂಪನಿಯ ನಾಲ್ವರು ಉದ್ಯೋಗಿಗಳಾದ ಸಂತೋಷ್ ಚಳ್ಕೆ, ವಿಜಯ್ ಶಿರ್ಸತ್, ತುಷಾರ್ ಪಾಂಚಾಲ್ ಹಾಗೂ ಶಿವಶಂಕರ್ ಬಿಷ್ತ್ ಎಂಬವರು ಈಗಾಗಲೇ ಕೊರೋನಾದಿಂದ ಪ್ರಾಣಕಳೆದುಕೊಂಡಿದ್ದು ,ಇದರಿಂದ ಅದ ಕಷ್ಟ ಅರಿತ ಕಂಪೆನಿ ನಮ್ಮ ಉಳಿದ ಎಲ್ಲ ಉದ್ಯೋಗಿಗಳಿಗೆ ಈ ಭರವಸೆ ನೀಡಲಾಗುತ್ತಿದೆ ಎಂದು ಬೊರೊಸಿಲ್ ಲಿಮಿಟೆಡ್ ಕಂಪನಿಯ ಎಂಡಿ ಶ್ರೀವರ್ ಖೆರುಕ ಹೇಳಿದ್ದಾರೆ.
ಬೊರೊಸಿಲ್ ಲಿಮಿಟೆಡ್ ಅಥವಾ ಬೊರೊಸಿಲ್ ರಿನ್ಯುವೇಬಲ್ ಲಿಮಿಟೆಡ್ನ ಯಾವುದೇ ಉದ್ಯೋಗಿ ಕೊರೋನಾದಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮುಂದಿನ 2 ವರ್ಷ ಕಾಲ ಸಂಬಳ ಮುಂದುವರಿಯಲಿದೆ. ಮಾತ್ರವಲ್ಲ ಅವರ ಮಕ್ಕಳು ಭಾರತದಲ್ಲಿ ಪದವಿ ಪಡೆಯುವವರೆಗಿನ ವಿದ್ಯಾಭ್ಯಾಸದ ಖರ್ಚನ್ನೂ ಭರಿಸಲಾಗುವುದು ಎಂದು ಹೇಳಿದ್ದಾರೆ.
ನಾವು ಹೀಗೆ ನೀಡುವ ಸಹಾಯ ಆ ಕುಟುಂಬಕ್ಕೆ ಆದ ನಷ್ಟದ ಅಳತೆ ಅಲ್ಲ. ಅಷ್ಟಕ್ಕೂ ನಮ್ಮ ನಿಜವಾದ ಆಸ್ತಿಯೇ ಆಗಿರುವ ಉದ್ಯೋಗಿಗಳನ್ನು ನಮ್ಮ ಕಂಪನಿಯ ಬ್ಯಾಲೆನ್ಸ್ ಶೀಟ್ನಲ್ಲಿ ತೋರಿಸಲಾಗದು. ಹೀಗಾಗಿ ನಾವು ಅವರಿಗೆ ಸಾಧ್ಯವಾದಷ್ಟೂ ಮಟ್ಟಿಗೆ ನೆರವು ನೀಡಲಿದ್ದೇವೆ. ಈ ಕಷ್ಟ ಕಾಲ ದೂರವಾಗಲಿದೆ, ಒಳ್ಳೆಯ ನಾಳೆಗಳು ಬರಲಿವೆ ಎಂದೂ ಅವರು ಭರವಸೆ ತುಂಬಿದ್ದಾರೆ. ಬೊರೊಸಿಲ್ ಎಂಡಿಯ ಈ ಉದಾತ್ತ ನಿಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
— Shreevar Kheruka (@ShreevarKheruka) April 30, 2021