ಸರ್ಕಾರಿ ಕಟ್ಟಡದಲ್ಲಿ ಖಾಸಗಿ ವ್ಯಕ್ತಿ ವಾಸ: ಕಂದಾಯ ಇಲಾಖೆಯಿಂದ ತೆರವು

ಹೊಸದಿಗಂತ ವರದಿ, ಕುಶಾಲನಗರ:
ಸರಕಾರಿ ಕಟ್ಟಡದಲ್ಲಿ ಅನಧಿಕೃತವಾಗಿ ವಾಸವಿದ್ದ ಖಾಸಗಿ ವ್ಯಕ್ತಿಯ ಕುಟುಂಬವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ನಡೆದಿದೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಗಂಗೆ ಕಲ್ಯಾಣ ಗ್ರಾಮದಲ್ಲಿ ಕಳೆದ 30 ವರ್ಷಗಳ ಹಿಂದೆ ಗಂಗೆ ಕಲ್ಯಾಣ ಗ್ರಾಮದಲ್ಲಿರುವ ಗಿರಿಜನ ಕುಟುಂಬದವರಿಗಾಗಿ ರೇಷ್ಮೆ ಇಲಾಖೆ ವತಿಯಿಂದ ಸರಕಾರಿ ಕಟ್ಟಡ ನಿರ್ಮಿಸಲಾಗಿತ್ತು.
ಈ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಕುಟುಂಬ ವಾಸಿಸುತ್ತಿರುವುದಾಗಿ ಸ್ಥಳೀಯ ಗಿರಿಜನ ಕುಟುಂಬದವರು ಕಂದಾಯ ಮತ್ತು ಸಂಬಂಧಿಸಿದ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾನೂನಿನ ಅನ್ವಯ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆಯ ಆ ಕುಟುಂಬವನ್ನು ತೆರವುಗೊಳಿಸಿದೆ.
ಸರಕಾರಿ ಕಟ್ಟಡದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ ಪ್ರಕರಣ ನ್ಯಾಯಾಲಯದ ಮಟ್ಟಿಲೇರಿತ್ತು. ನಂತರ ನ್ಯಾಯಾಲಯದಲ್ಲಿ ಪ್ರಕರಣವು ವಜಾಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ತಹಶೀಲ್ದಾರರ ಅದೇಶದಂತೆ ಕಂದಾಯ ಇಲಾಖೆಯ ವತಿಯಿಂದ ಪೊಲೀಸರ ಸಹಕಾರದಿಂದೊಂದಿಗೆ ಸರಕಾರಿ ಕಟ್ಟಡವನ್ನು ಮುಕ್ತಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ಪರೀವಿಕ್ಷಕ ಸಂತೋಷ್, ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಪುನೀತ್ ಸೇರಿದಂತೆ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!