ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವೀಕೆಂಡ್‌ಗಿಲ್ಲ ಸುದೀಪ್ ಭೇಟಿ: ಮನೆಮಂದಿಯ ಪ್ರೀತಿಯ ಪತ್ರ, ರುಚಿಯಾದ ಅಡುಗೆಗೆ ಥ್ಯಾಂಕ್ಸ್ ಎಂದ ಪ್ರಿಯಾ ಸುದೀಪ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವೀಕೆಂಡ್ ಆಕರ್ಷಣೆ ಕಿಚ್ಚ ಸುದೀಪ್ ಈ ವಾರ ಅನಾರೋಗ್ಯದ ಕಾರಣದಿಂದ ಶೂಟಿಂಗ್‌ಗೆ ಹಾಜರಾಗಿಲ್ಲ. ಈ ವೇಳೆ ಕ್ರಿಯೇಟಿವ್ ಟೀಂ ಯಾವ ರೀತಿ ಐಡಿಯಾ ಮಾಡುತ್ತಾರೆ ನೋಡಬೇಕು ಎಂದು ಸುದೀಪ್ ಹೇಳಿದ್ದರು.
ಇದೀಗ ಬಿಗ್‌ಬಾಸ್ ಮಂದಿಯಿಂದ ಸುದೀಪ್ ಅವರಿಗೇ ಸರ್‌ಪ್ರೈಸ್ ಸಿಕ್ಕಿದೆ.
ಬಿಗ್‌ಬಾಸ್ ಮಂದಿಗೆ ಸುದೀಪ್ ಆರೋಗ್ಯದ ಬಗ್ಗೆ ತಿಳಿಸಿ ಮನೆಯವರೆಲ್ಲ ಅವರಿಗೆ ಅಡುಗೆ ಮಾಡಿ ಹಾಗೂ ಪತ್ರ ಬರೆಯಿರಿ ಎನ್ನಲಾಗಿತ್ತು. ಅಂತೆಯೇ ಪ್ರೀತಿಯ ಪತ್ರ ಹಾಗೂ ಊಟವನ್ನು ಸುದೀಪ್ ಅವರ ಮನೆಗೆ ತಲುಪಿಸಲಾಗಿದೆ. ಇದಕ್ಕೆ ಪ್ರಿಯಾ ಸುದೀಪ್ ಧನ್ಯವಾದ ಹೇಳಿದ್ದಾರೆ. ಪ್ರೀತಿಯ ಪತ್ರ, ರುಚಿಯಾದ ಅಡುಗೆಗೆ ಧನ್ಯವಾದಗಳು. ಸುದೀಪ್ ಸುಧಾರಿಸಿಕೊಳ್ಳುತ್ತಿದ್ದಾರೆ. ಶೀಘ್ರವೇ ನಿಮ್ಮ ಮುಂದೆ ಬರಲಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss