ಪುತ್ರಿಗೆ ʼಮಾಲತಿ ಮೇರಿʼ ಎಂದು ನಾಮಕರಣ ಮಾಡಿದ ಪ್ರಿಯಾಂಕಾ ಚೋಪ್ರಾ- ನಿಕ್‌ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ವರ್ಷಾರಂಭದಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ತಮ್ಮ ಮಗುವಿಗೆ ʼಮಾಲತಿ ಮೇರಿ ಚೋಪ್ರಾ ಜೋನಾಸ್ʼ ಎಂದು ಹೆಸರಿಸಿದ್ದಾರೆ ಎಂದು ವರದಿಯಾಗಿದೆ.
ಮಗುವಿನ ಜನ್ಮ ಪ್ರಮಾಣಪತ್ರದಲ್ಲಿ ʼಮಾಲತಿ ಮೇರಿʼ ಎಂದು ಬರೆಯಲಾಗಿದೆ ಎಂದು ಟಿಎಂಜೆಡ್‌ ಎಂಬ ಮನೋರಂಜನಾ ವೆಬ್‌ ಸೈಟ್‌ ಸುದ್ದಿ ಮಾಡಿದೆ. ಮಾಲತಿ ಎಂಬುದು ಸಂಸ್ಕೃತದ ಮೂಲದ ಪದವಾಗಿದ್ದು, ಪರಿಮಳ ಭರಿತ ಹೂವು ಎಂಬ ಅರ್ಥ ನೀಡುತ್ತದೆ.
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಈ ವರ್ಷದ ಜನವರಿ 15 ರಂದು ತಮ್ಮ ಮಗಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಈ ಸಂತಸದ ಸುದ್ದಿಯನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಾವು ನಮ್ಮ ಮಗಳನ್ನು ಮನೆಗೆ ಸ್ವಾಗತಿಸಿದ್ದೇವೆ. ಈ ವಿಚಾರವನ್ನು ಹಂಚಿಕೊಳ್ಳಲು ತುಂಬಾ ಸಂತೋಷಿಸುತ್ತೇವೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೇವೆ. ನಮ್ಮ ಖಾಸಗೀತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದರು.
ಭಾಲಿವುಡ್‌ ಖ್ಯಾತ ನಟಿ ಪ್ರಿಯಾಂಕಾ ಮತ್ತು ಸಂಗೀತಗಾರ ನಿಕ್ ವಿವಾಹಕ್ಕೂ ಮುನ್ನ ಹಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ್ದರು. ದಂಪತಿಗಳು ಹಿಂದೂ ಮತ್ತು ಕ್ರಿಶ್ಚಿಯನ್ ಶೈಲಿಯಲ್ಲಿಅದ್ಧೂರಿಯಾಗಿ ವಿವಾಹವಾಗಿದ್ದರು. ರಾಜಸ್ಥಾನದ ಅರಮನೆಯಲ್ಲಿ ವಿವಾಹ ಮಹೋತ್ಸವ ನಡೆದಿತ್ತು.
ಪ್ರಿಯಾಂಕ ಸದ್ಯ ಫರ್ಹಾನ್ ಅಖ್ತರ್ ನಿರ್ದೇಶನದ ಹಿಂದಿ ಚಿತ್ರ ‘ಜೀ ಲೇ ಜರಾ’ದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!