ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯ ಎಂಟ್ರಿ ಕೊಡಲಿದ್ದಾರೆ . ಈ ಕುರಿತು ಸ್ವತ: ಪತಿ ರಾಬರ್ಟ್ ವಾದ್ರಾ ಸುಳಿವು ಕೊಟ್ಟಿದ್ದಾರೆ. ಇನ್ನು, ವಾರಾಣಸಿಯಲ್ಲಿ ಅಂದ್ರೆ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಅಖಾಡಕ್ಕಿಳೀತಾರಾ ಎಂಬ ಮಾತೂ ಕೇಳಿ ಬರುತ್ತಿದೆ.
ಈ ಕುರಿತು ‘INDIA’ ಮೈತ್ರಿಕೂಟದ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಹೇಳಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ.
ವಾರಾಣಸಿ ಜನತೆಗೆ ಪ್ರಿಯಾಂಕಾ ಗಾಂಧಿ ಬೇಕಾಗಿದ್ದಾರೆ. ವಾರಾಣಸಿ, ರಾಯ್‌ಬರೇಲಿ, ವಾರಣಾಸಿ ಮತ್ತು ಅಮೇಥಿ ಹೋರಾಟ ಬಿಜೆಪಿಗೆ ಕಠಿಣವಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.