Thursday, June 1, 2023

Latest Posts

ನಾಳೆ ಮೈಸೂರಿಗೆ ಪ್ರಿಯಾಂಕಾ ಗಾಂಧಿ: ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ಮತ್ತಷ್ಟು ರಂಗೇರುತ್ತಿದೆ. ರಾಷ್ಟ್ರದ ನಾಯಕರು ರಾಜ್ಯದ ಕಡೆ ಮುಖಮಾಡುತ್ತಿದ್ದು, ಎಲ್ಲಾ ಪಕ್ಷಗಳಿಂದ ರೋಡ್ ಶೋ, ಸಮಾವೇಶಗಳು ನಡೆಯುತ್ತಿವೆ. ಕಾಂಗ್ರೆಸ್ ಕೂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದು, ನಾಳೆ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಪ್ರಿಯಾಂಕಾ ಗಾಂಧಿ ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ನಾಳೆ ಮೈಸೂರಿಗೆ ಆಗಮಿಸಲಿರುವ ಕಾಂಗ್ರೆಸ್ ನಾಯಕಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆಗೆ ಟಿ.ನರಸೀಪುರ ಕ್ಷೇತ್ರದ ಹೆಳವರಹುಂಡಿಯಲ್ಲಿ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2.30ಕ್ಕೆ ಹನೂರು ಕ್ಷೇತ್ರಕ್ಕೆ ತಲುಪಲಿದ್ದು, ಗೌರಿಶಂಕರ್ ಕನ್ವೆನ್ಷನ್ ಹಾಲ್‌ನಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ 1 ಗಂಟೆಗಳ ಕಾಲ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ.

ಸಂವಾದ ಕಾರ್ಯಕ್ರಮದ ಬಳಿಕ ಪ್ರಿಯಾಂಕಾ ಗಾಂಧಿ 4.15ಕ್ಕೆ ಕೆ.ಆರ್.ನಗರಕ್ಕೆ ತೆರಳಲಿದ್ದಾರೆ. ಸಂಜೆ 5.30 ರಿಂದ 6.30ರ ವರೆಗೆ ಅಲ್ಲಿ ನಡೆಯುವ ರೋಡ್‌ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ತೋಪಮ್ಮನ ದೇವಸ್ಥಾನದಿಂದ ಸುಮಾರು‌ 2 ಕಿ.ಮೀ. ವರೆಗೆ ಈ ರೋಡ್‌ ಶೋ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!