ಪ್ರೋ ಕಬಡ್ಡಿ ಲೀಗ್‌- ಯುಪಿ ಯೋಧಾ ವಿರುದ್ಧ ಗೆದ್ದ ಪುಣೇರಿ ಪಲ್ಟನ್‌, ಬೆಂಗಳೂರು ಈಗಲೂ ನಂ.1

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೋ ಕಬಡ್ಡಿ ಲೀಗ್‌ ನಲ್ಲಿ ಪುಣೇರಿ ಪಲ್ಟನ್‌ ಯುಪಿ ಯೋಧಾ ವಿರುದ್ಧ 44-38 ಅಂಕಗಳಿಂದ ಜಯ ಗಳಿಸಿದೆ.
ಈವರೆಗೆ 14 ಪಂದ್ಯಗಳನ್ನಾಡಿದ ಪುಣೇರಿ ಪಲ್ಟನ್‌ ನ 7ನೇ ಗೆಲುವು ಇದಾಗಿದ್ದು, ಯುಪಿ ಯೋಧಾ ತಂಡವೂ 14 ಪಂದ್ಯಗಳಲ್ಲಿ ಕೇವಲ 5ರಲ್ಲಿ ಗೆಲುವು ಸಾಧಿಸಿದ್ದು, 6 ಪಂದ್ಯದಲ್ಲಿ ಸೋಲನುಭವಿಸಿತು.
ಯುಪಿ ಯೋಧಾ ತಂಡ ಪಾಯಿಂಟ್‌ ಟೇಬಲ್‌ ನಿಂದ ಕುಸಿಯುತ್ತಿದ್ದು, ಏಳನೇ ಸ್ಥಾನದಲ್ಲಿದ್ದರೆ, 8ನೇ ಸ್ಥಾನದಲ್ಲಿ ಪುಣೇರಿ ಪಲ್ಟನ್‌ ಇದೆ. 46 ಅಂಕಗಳ ಮೂಲಕ ಬೆಂಗಳುರು ಬುಲ್ಸ್‌ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಿಲ್ಲಿ, ಮೂರನೇ ಸ್ಥಾನದಲ್ಲಿ ಹರಿಯಾಣ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!