ಪ್ರೋ ಕಬಡ್ಡಿ: ಸೆಮಿ ಫಿನಾಲೆಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೋ ಕಬಡ್ಡಿ ಲೀಗ್‌ ನ ಎಲಿಮಿನೇಟರ್‌ ಪಂದ್ಯಗಳು ಮುಗಿದಿವೆ. ಗುಜರಾತ್‌ ಜೈಂಟ್ಸ್‌ ರನ್ನು ಸೋಲಿಸುವ ಮೂಲಕ ಬೆಂಗಳೂರು ಬುಲ್ಸ್‌ ಸೆಮಿ ಫಿನಾಲೆಗೆ ಎಂಟ್ರಿ ಕೊಟ್ಟಿದೆ.
ಬೆಂಗಳೂರು ಬುಲ್ಸ್‌ ನ ಸ್ಟಾರ್‌ ರೈಡರ್‌ ಪವನ್‌ ಕುಮಾರ್‌ ಶೆಹ್ರಾವತ್‌ ಅವರ ಭರ್ಜರಿ ಪ್ರದರ್ಶನದಿಂದ ತಂಡವನ್ನು ಸೆಮಿ ಫೈನಲ್ಸ್‌ ಗೆ ತಲುಪುವಂತೆ ಮಾಡಿದೆ.
ಆರಂಭದಿಂದಲೂ ಒನ್‌ ಸೈಡೆಡ್‌ ಆಗಿದ್ದ ಪಂದ್ಯದಲ್ಲಿ ಪವನ್‌ ಹಾಗೂ ಚಂದ್ರನ್‌ ರಂಜಿತ್‌ ಅವರ ಬ್ಯಾಕ್‌ ಟು ಬ್ಯಾಕ್‌ ಪಾಯಿಂಟ್ಸ್‌ ಗುಜರಾತ್‌ ಜೈಂಟ್ಸ್‌ ಗೆ ತಲೆ ನೋವಾಗಿತ್ತು.
ಅಂತಿಮವಾಗಿ ಬೆಂಗಳೂರು ಬುಲ್ಸ್‌ ತಂಡ 49 ಅಂಕ ಗಳಿಸಿದರೆ, ಗುಜರಾತ್‌ 29 ಅಂಕ ಪಡೆಯುವ ಮೂಲಕ ಸೋಲೊಪ್ಪಿಕೊಂಡಿತು.
ನಾಳೆ ನಡೆಯಲಿರುವ ಸೆಮಿ ಫಿನಾಲೆಯಲ್ಲಿ ಬೆಂಗಳೂರು ಬುಲ್ಸ್‌ ಎದುರು ದಬಾಂಗ್‌ ಡೆಲ್ಲಿ ಸೆಣೆಸಾಡಲಿದ್ದು, ಪಟ್ನಾ ಪೈರೇಟ್ಸ್‌ ಹಾಗೂ ಯುಪಿ ಯೋಧಾಸ್‌ ಮುಖಾಮುಖಿಯಾಗಲಿದ್ದಾರೆ. ಫೆ.25ಕ್ಕೆ ಪ್ರೋ ಕಬಡ್ಡಿ ಫಿನಾಲೆ ಪಂದ್ಯ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!