ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಆಗ್ತಿದೆ ಎಂದರೆ ದೇಹದ ಈ ಭಾಗಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಬೇಡಿ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.. ಯಾವ ಭಾಗದಲ್ಲಿ ಊತ ನೋಡಿ..
ಪಾದಗಳು ಅಥವಾ ಮೊಣಕಾಲುಗಳಲ್ಲಿ ಊತವಿದ್ದರೆ ಅದು ಮೂತ್ರಪಿಂಡದ ಸಮಸ್ಯೆ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಕಾಲುಗಳಲ್ಲಿ ಲಿಕ್ವಿಡ್ ಸಂಗ್ರಹ ಆಗಲು ಶುರುವಾಗುತ್ತದೆ. ಕಾರಣವಿಲ್ಲದೇ ಪಾದಗಳಲ್ಲಿ ಊತವಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು.
ಮೂತ್ರಪಿಂಡವು ಹಾನಿಗೊಳಗಾದಾಗ ಮುಖವೂ ಊದಿಕೊಳ್ಳಲು ಪ್ರಾರಂಭಿಸುತ್ತದೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬಾರದು. ಇನ್ನು ಅನೇಕ ಕಾರಣಗಳಿಂದ ಮುಖ ಊದಿಕೊಳ್ಳುತ್ತದೆ.
ಕೈಗಳಲ್ಲಿ ಊತ ಮತ್ತು ಬೆರಳುಗಳಲ್ಲಿ ಆಗಾಗ್ಗೆ ನೋವು ಬರುತ್ತಿದ್ದರೆ ಅದೂ ಕೂಡ ಕಿಡ್ನಿ ಸಮಸ್ಯೆ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಬೆರಳುಗಳಲ್ಲಿ ಊತ ಕಂಡುಬಂದರೆ ತಕ್ಷಣ ವೈದ್ಯರ ಬಳಿಗೆ ಬರಬೇಕು
ಹೊಟ್ಟೆಯಲ್ಲಿ ಊತ ಉಂಟಾಗಬಹುದು. ದೀರ್ಘಕಾಲದವರೆಗೆ ಹೊಟ್ಟೆಯ ಒಂದು ಬದಿಯಲ್ಲಿ ಊತ ಮತ್ತು ನೋವಿದ್ದರೆ ಆದಷ್ಟು ಬೇಗ ವೈದ್ಯರ ಸಂಪರ್ಕಿಸಬೇಕು.
ಕಣ್ಣುಗಳ ಊತಕ್ಕೆ ಇದೊಂದೇ ಕಾರಣವಲ್ಲ. ಹಲವು ಕಾರಣಗಳಿರಬಹುದು. ಆದರೆ ಕಣ್ಣುಗಳ ಸುತ್ತ ಆಗಾಗ ಊತ ಬರುತ್ತಿದ್ದರೆ ನಿರ್ಲಕ್ಷಿಸಬಾರದು.