Saturday, August 13, 2022

Latest Posts

ಬೆಲೆಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಆಡಳಿತದಲ್ಲಿರುವ ಬಿಜೆಪಿಗೆ ಕಾಣುತ್ತಿಲ್ಲವೇ: ಶಿವಕುಮಾರ್ ಪ್ರಶ್ನೆ

ಹೊಸ ದಿಗಂತ ವರದಿ, ಮಂಗಳೂರು:

ಕಳೆದ ಒಂದೂವರೆ ತಿಂಗಳಲ್ಲಿ10 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಆದರೆ, ಯಾವೊಬ್ಬ ಬಿಜೆಪಿ ನಾಯಕರೂ ಈ ಬಗ್ಗೆ ಮಾತನಾಡುತ್ತಿಲ್ಲ. ಬೆಲೆಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಆಡಳಿತದಲ್ಲಿರುವ ಬಿಜೆಪಿಗೆ ಕಾಣುತ್ತಿಲ್ಲವೇ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂಧನ ದರ ಏರಿಕೆ ಕುರಿತು ಬಿಜೆಪಿ ನಾಯಕರು ಹಿಂದೆ ಏನು ಹೇಳಿದ್ದರು, ಈಗ ಏನು ಮಾಡುತ್ತಿದ್ದಾರೆ? ಡೀಸೆಲ್ ಬೆಲೆ ಏರಿಕೆಯಿಂದಾಗಿ ಎಲ್ಲ ಅಗತ್ಯ ವಸ್ತುಗಳೂ ತುಟ್ಟಿಯಾಗಿವೆ. ಜನರ ನೋವು ಕೇಳುವವರಿಲ್ಲ ಎಂದು ಟೀಕಿಸಿದರು.
ರಾಜ್ಯಾದ್ಯಂತ ಕೊರೋನಾ ಸಂಕಷ್ಟ ಇನ್ನೂ ಇದ್ದರೂ ಸ್ಥಳೀಯ ಸಂಸ್ಥೆ, ನಗರ ಸ್ಥಳೀಯ ಸಂಸ್ಥೆ ಎಲ್ಲ ಕಡೆ ಆಸ್ತಿ ತೆರಿಗೆ ಹೆಚ್ಚಿಸಿದ್ದಾರೆ. ರಾಜ್ಯ ಸರಕಾರ ಪ್ರತಿದಿನ ಎಂಬಂತೆ ಒಂದೊಂದು ಕಾನೂನು ಜಾರಿಗೆ ತರುತ್ತಿದೆ. ಜನರು ಬೀದಿಗಿಳಿಯುತ್ತಿದ್ದಾರೆ ಎಂದು ಡಿಕೆಶಿ ಆಕ್ಷೇಪಿಸಿದರು.
ಚುನಾವಣೆಗೆ ಮೊದಲು ಬಿಜೆಪಿಯವರು ಏನೆಲ್ಲ ಆಶ್ವಾಸನೆ ನೀಡಿದ್ರು, ಈಗ ಆ ಆಶ್ವಾಸನೆಗಳೇನು ಎಂಬುದನ್ನು ಮತ್ತೊಮ್ಮೆ ಹೇಳಿ ನೋಡೋಣ ಎಂದು ವ್ಯಂಗ್ಯವಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss